ಕೈಕಂಬ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ ಕಾಜಿಲ ಅಂಗನವಾಡಿಯಲ್ಲಿ ಆಟಿದ ನೆಂಪು ಹಾಗೂ ಕೋಟಿ ವೃಕ್ಷ ಯೋಜನೆಯಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮವು ಜು.30 ರಂದು ಶನಿವಾರ ಕಾಜಿಲ ಅಂಗನವಾಡಿ ಕೇಂದ್ರದಲ್ಲಿ ಜರಗಿತು. ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಗಂಜಿಮಠ ಪಿಡಿಒ ಜಗದೀಶ್ ಶಶಿ ನೆಡುವ ಮೂಲಕ ಕೋಟಿ ವೃಕ್ಷ ಯೋಜನೆಗೆ ಚಾಲನೆ ನೀಡಿದರು. ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಮಾಧವ, ಗ್ರಾ.ಪಂ. ಸದಸ್ಯೆ ಹರಿನಾಕ್ಷಿ , ಅಂಗನವಾಡಿ ಶಿಕ್ಷಕಿ ನಾಗವೇಣಿ , ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ , ಜಯಂತಿ, ಮತ್ತಿತರರು ಉಪಸ್ಥಿತರಿದ್ದರು.







