ಕೈಕಂಬ :ಪೊಳಲಿ ರಾಮಕೃಷ್ಣ ತಪೋವನದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಜು.26ರಂದು ಆಚರಿಸಲಾಯಿತು. ನಿವೃತ ಸೇನಾ ಅಧಿಕಾರಿ ನಾಯಿಕ್ ಶಿವರಾಮ್ ರೈ ವರು ಕಾಗರ್ಿಲ್ ಯುದ್ದದ ಸಂದರ್ಭದಲ್ಲಿ ಆದ ತನ್ನ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. 
ಆಶ್ರ್ರಮದ ವಿದ್ಯಾರ್ಥಿಗಳು ಹಾಗೂ ರಾಮಕೃಷ್ಣರ ಭಕ್ತಾಧಿಗಳು ದೀಪ ಹಿಡಿದು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯವರೆಗೆ ಪಥ ಸಂಚಲನದಲ್ಲಿ ತೆರಲಿ ನಂತರ ಕಾರ್ಗಿಲ್ ಯುದ್ಧದಲ್ಲಿ ಮಡಿದ ಜೀವಗಳನ್ನು ತಾಯಿನಾಡಿಗೆ ಬಲಿಕೊಟ್ಟ ಹುತಾತ್ಮರಾದವರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಉಪಸ್ಥಿತರಿದ್ದರು.









