ಕಟೀಲು 6 ಮೇಳಗಳಿಂದ ಪ್ರತಿದಿನ ಯಕ್ಷಗಾನ * 31ರಂದು ಯಕ್ಷದೇವ ಪ್ರಶಸ್ತಿ ಪ್ರದಾನ
ಮೂಡುಬಿದಿರೆ: ಬೆಳುವಾಯಿ ಯಕ್ಷದೇವ ಮಿತ್ರ ಕಲಾಮಂಡಳಿಯ ಆಶ್ರಯದಲ್ಲಿ ಕಟೀಲು 6 ಮೇಳಗಳ ಕಲಾವಿದರಿಂದ ಮಳೆಗಾಲದ ಮಹೋನ್ನತ ಯಕ್ಷಮಹೋತ್ಸವ ಹಾಗೂ 19ನೇ ವರ್ಷದ ಯಕ್ಷಾಂಬಾರಾಧನಮ್ ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ಜುಲೈ 26ರಿಂದ 31ರವರೆಗೆ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದ ಮಿಜಾರು ದಿ.ಸುಬ್ರಾಯ ಭಟ್ ವೇದಿಕೆಯಲ್ಲಿ ನಡೆಯಲಿದೆ.
ನಿತ್ಯ ಸಂಜೆ 5ರಿಂದ ಸಭಾ ಕಾರ್ಯಕ್ರಮ, 6 ಗಂಟೆಗೆ ಯಕ್ಷಗಾನ ನಡೆಯಲಿರುವುದು. ಜುಲೈ 26ರಂದು ಸಂಜೆ 3.30ಕ್ಕೆ ಕಾರ್ಕಳ ಅನಂತಶಯನ ಮಹಿಳಾ ಯಕ್ಷಗಾನ ಮಂಡಳಿಯಿಂದ ಕೃಷ್ಣ ಸಂಧಾನ ತಾಳಮದ್ದಳೆ ನಡೆಯಲಿದೆ. ಶ್ರೀ ಕಟೀಲು ಮೇಳಗಳ ಯಜಮಾನ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ ಯಕ್ಷಾಂಬಾರಾಧನಮ್ ಅನ್ನು ಉದ್ಘಾಟಿಸಲಿದ್ದಾರೆ. ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇ.ಮೂ ವಾಸುದೇವ ಆಸ್ರಣ್ಣ ಆರ್ಶೀಚನ ನೀಡಲಿರುವರು. ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಯಕ್ಷ ಗುರು ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರನ್ನ ಸನ್ಮಾನಿಸಲಾವುದು. ದಿ.ಮಿಜಾರು ಅಣ್ಣಪ್ಪ ಹಾಸ್ಯಗಾರ ಅವರ ಸಂಸ್ಮರಣೆಯನ್ನು ವಿಮರ್ಶಕ ಸುಬ್ರಹ್ಮಣ್ಯ ಬೈಪಾಡಿತ್ತಾಯ ನಂದಳಿಕೆ ಮಾಡಲಿರುವರು. ಕಟೀಲು ಒಂದನೇ ಮೇಳದವರಿಂದ ವಧು-ವೈಶ್ಯಾಲಿನಿ ಯಕ್ಷಾಗಾನ ನಡೆಯಲಿದೆ.
ಜುಲೈ 27ರಂದು ಅರ್ಚಕ ಅಲಂಗಾರು ದಿ. ಸೀತಾರಾಮ ಭಟ್(ಕಾಳು ಭಟ್) ಸಂಸ್ಮರಣೆ ನಡೆಯಲಿದೆ. ಮೂಡುಬಿದಿರೆ ಬ್ರಾಹ್ಮಣ ಸಂಘದ ಅಧ್ಯಕ್ಷ ವಾದಿರಾಜ ಮಡ್ಮಣ್ಣಾಯ ಸಂಸ್ಮರಣ ಭಾಷಣ ಮಾಡಲಿದ್ದಾರೆ.
ಸಂಸ್ಕøತಿ ಚಿಂತಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಕಟೀಲು ಮೇಳದ ರಂಗ ಸಹಾಯಕ ವಿಠಲ ಶೆಟ್ಟಿ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಗುವುದು. ಅಲಂಗಾರು ಶ್ರೀಮಹಾಲಿಂಗೇಶವರ ದೇವಸ್ಥಾನದ ಅರ್ಚಕ ವೇ.ಮೂ ಈಶ್ವರ ಭಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿ ಕುಮಾರ್ ಮುಖ್ಯ ಅತಿಥಿಗಳಾಗಿರುವರು. ಬಳಿಕ ಕಟೀಲು 2ನೇ ಮೇಳದವರಿಂದ ಶ್ರೀರಾಮಾಶ್ವಮೇಧ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಜುಲೈ 28ರಂದು ಕಲಾವಿದ ದಿ.ಪದ್ಮನಾಭ ತಂತ್ರಿ ನಾರಾವಿ ಸಂಸ್ಮರಣೆ ನಡೆಯಲಿದ್ದು, ಕಲಾ ಗುರು ಕೆ.ವಿ ರಮಣ್ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಶ್ರೀಕ್ಷೇತ್ರ ಕಟೀಲಿನ ಅರ್ಚಕ ವೇ.ಮೂ ಅನಂತ ಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕಟೀಲು 3ನೇ ಮೇಳದ ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ನಡೆಯಲಿದೆ.
ಜುಲೈ 29ರಂದು ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ ನಡೆಯಲಿದ್ದು, ಕಾಂತಾವರ ಯಕ್ಷದೇಗುಲದ ಕಾರ್ಯಾಧ್ಯಕ್ಷ ಮಹಾವೀರ ಪಾಂಡಿ ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಮಾಜಿ ಸಚಿವ ಅಮರನಾಥ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಶ್ರೀಕ್ಷೇತ್ರ ಕಟೀಲಿನ ಆರ್ಚಕ ವೇ.ಮೂ ವೆಂಕಟ್ರಮಣ ಆಸ್ರಣ್ಣ ಆಶೀರ್ವಚಿಸಲಿದ್ದಾರೆ. ಸ್ತ್ರೀ ಪಾತ್ರಧಾರಿ ಪುಂಡರೀಕಾಕ್ಷ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕಟೀಲು 4ನೇ ಮೇಳದಿಂದ ಅಷ್ಟಾಕ್ಷರೀ ಮಹಿಮೆ ಯಕ್ಷಗಾನ ನಡೆಯಲಿದೆ.
ಜುಲೈ 30ರಂದು ಮಧ್ಯಾಹ್ನ 2.30ರಂದು ಮಂಗಳೂರು ವಿ.ವಿ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕತ್ವದಲ್ಲಿ ತಾಳಮದ್ದಳೆ ಅರ್ಥಗಾರಿಕೆ ವಿಚಾರಗೋಷ್ಠಿ ನಡೆಯಲಿದೆ.
ಬಳಿಕ ದಿ.ವನಜಾಕ್ಷಿ ಅಮ್ಮ ಸಂಸ್ಮರಣೆ ನಡೆಯಲಿದ್ದು, ವೆಂಕಟೇಶ್ ತಂತ್ರಿಯವರು ಸ್ಮರಣೆ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷೆ ವಹಿಸಲಿದ್ದು, ಯಕ್ಷಗಾನ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಅವರನ್ನು ಸನ್ಮಾನಿಸಲಾಗುವುದು. ಶ್ರೀಪತಿ ಭಟ್ ಉಪಸ್ಥಿತರಿರುವರು. ಪಟ್ಲ ಸತೀಶ್ ಶೆಟ್ಟಿ ಭಾಗವತ ಸಾರಥ್ಯದಲ್ಲಿ ಕಟೀಲು 5ನೇ ಮೇಳದವರಿಂದ ಭಕ್ತಿ ಪಾರಮ್ಯ ಯಕ್ಷಗಾನ ನಡೆಯಲಿದೆ.
ಜುಲೈ 31ರಂದು ಮಧ್ಯಾಹ್ನ 3ಗಂಟೆಗೆ ಕಾಂತಾವರ ಯಕ್ಷದೇಗುಲ ಬಳಗದಿಂದ ದಕ್ಷಾಧ್ವರ ಮಕ್ಕಳ ಯಕ್ಷಗಾನ ನಡೆಯಲಿದೆ. ಬಳಿಕ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀಕ್ಷೇತ್ರ ಕಟೀಲಿನ ಅರ್ಚಕ ªವೇ.ಮೂ ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಬ್ಯಾಂಕ್ ಜಿ.ಎಂ ಬಿ. ಚಂದ್ರಶೇಖರ ರಾವ್, ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಸಹಿತ ಗಣ್ಯರು ಭಾಗವಹಿಸಲಿದ್ದಾರೆ.
ಸ್ತ್ರೀ ಪಾತ್ರಧಾರಿ ಕೊಕ್ಕಡ ಈಶ್ವರ ಭಟ್, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರಿಗೆ ಯಕ್ಷದೇವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉದ್ಯಮಿ ಉದಯ ಶೆಟ್ಟಿ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕøತ ಕಲಾವಿದೆ ಪಂಚಮಿ ಮಾರೂರು ಅವರನ್ನು ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕಟೀಲು 6ನೇ ಮೇಳದವರಿಂದ ಗರುಡೋದ್ಭವ ಯಕ್ಷಗಾನವಿದೆ ಎಂದು ಶ್ರೀಯಕ್ಷದೇವ ಮಿತ್ರ ಕಲಾ ಮಂಡಳಿಯ ಎಂ.ದೇವಾನಂದ ಭಟ್ ತಿಳಿಸಿದ್ದಾರೆ.
