ಉಳ್ಳಾಲ: ಬೇಸಿಗೆಯಲ್ಲಿ ಬಹಳಷ್ಟು ನೀರಿನ ಬರ ಇರುವ ಪ್ರದೇಶ ನರಿಂಗಾನ ಗ್ರಾಮದ ಬೋಳ. ಮಳೆಗಾಲದಲ್ಲಿ ಅದಷ್ಟು ನೀರು ಇಂಗಿಸುವ ಮೂಲಕ ನೀರಿನ ಸಮಸ್ಯೆ ನಾಂದಿಹಾಡುವ ಎಂದು ಜಿ.ಪಂ ಸದಸ್ಯೆ ಮಮಾತ ಗಟ್ಟಿ ಕರೆನೀಡಿದರು.ಅವರು ನರಿಂಗಾನ ಗ್ರಾಮದ ಬೋಳ ಸಂತ ರಾರೆನ್ಸ್ ಚರ್ಚ್ ವಠಾರದಲ್ಲಿ ಭಾನುವಾರ ನಡೆದ ವನಮಹೊತ್ಸವ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೋಳ ಪ್ರದೇಶದಲ್ಲಿ ಕೆರೆಗಳಿದರೆ ಅದರ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಪ್ರಥಮ ಅಧ್ಯತೆ ನೀಡಲಾಗುವುದು. ಅಲ್ಪ ಸಂಖ್ಯಾತ ನಿಗಮ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಚರ್ಚ್ಗಳಲ್ಲಿ ನಡಿಸಬೇಕು ಎಂದು ಹೇಳಿದರು.


ಜನ ಶಿಕ್ಷಣ ಟ್ರಸ್ಟ್ನ ಶ್ರೀನಿವಾಸ್ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಮಾಹಿತಿ ನೀಡಿದರು.ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಕೋಡಿ, ಉಪಾಧ್ಯಕ್ಷ ನಳಿನಾಕ್ಷಿ, ಅಭಿವೃದ್ಧಿ ಅಧಿಕಾರಿ ನಳಿನಿ, ಸದಸ್ಯರಾದ ಮುರುಳೀಧರ್ ಶೆಟ್ಟಿ ಮೊರ್ಲ, ಜೋತಿ ಡಿ’ಸೋಜಾ, ಅಬ್ದುಲ್ ಲತೀಫ್, ಮಾಜಿ ಸದಸ್ಯರಾದ ಜೋಸೆಫ್, ಶೇಕಬ್ಬ, ಸಂತ ಲಾರೆನ್ಸ್ ಚರ್ಚ್ನ ಉಪಾಧ್ಯಕ್ಷ ರಿಚಾಡ್ ಡಿ’ಸೋಜಾ, ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪೂಣಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಸಂತ ಲಾರೆನ್ಸ್ ಚರ್ಚ್ನ ಕಾರ್ಯದರ್ಶಿ ವಿಕ್ಟರ್ ಡಿ’ಸೋಜಾ ಸ್ವಾಗತಿಸಿದರು. ಚರ್ಚ್ನ ಧರ್ಮಗುರು ಮೈಕಲ್ ಡಿ’ಸೋಜಾ ವಂದಿಸಿದರು.



