ಉಳ್ಳಾಲ : ಪರಿಸರವು ಇಂದು ಮಳೆ, ಬೆಳೆ, ಮಾನವನೆಂಬ ಸಮತೋಲನದಿಂದತಪ್ಪಿ ಸರ್ವನಾಶದತ್ತ ಸಾಗುತ್ತಿದೆ. ಮಾನವನ ಸ್ವಯಂಕೃತಅಪರಾಧದಿಂದಾಗಿ ನಾವು ಪರಿತಪ್ಪಿಸ ಬೇಕಾಗುತ್ತದೆ.ಇದಕ್ಕಾಗಿ ನಾವು ಪರಿಸರವನ್ನು ಸಂರಕ್ಷಿಸ ಬೇಕೆಂದು ಮಂಗಳೂರು ತಾಲೂಕು ಪಂಚಾಯತ್ ಸದಸ್ಯೆ ಸುರೇಖ ಚಂದ್ರಹಾಸ ಅವರು ಹೇಳಿದರು. ಅವರು ಹಳೆಕೋಟೆ ಸಯ್ಯಿದ್ ಮದನಿ ಉರ್ದು ಹಿ.ಪ್ರಾ.ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಒಂದೊಂದು ಸಸಿ ನೆಟ್ಟು ಪೋಷಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಜನಾಬ್‍ಯು.ಎನ್.ಇಬ್ರಾಹಿಂರವರು ವಹಿಸಿದ್ದರು.
DSC04194
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕರಾದ ಹಾಜಿಯು. ಹೆಚ್.ಮಹಮ್ಮದ್, ಆಡಳಿತಾಧಿಕಾರಿ ಹಾಜಿಅಬ್ದುಲ್ ಲತೀಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳಾದ ಜನಾಬ್‍ಅಬ್ದುಲ್‍ರಝಾಕ್, ಫಾರೂಕ್‍ಯು.ಹೆಚ್, ಅಲ್ತಾಫ್‍ಯು.ಹೆಚ್, ಅಬ್ದುಲ್‍ಕರೀಂ, ಅಬ್ದುಲ್‍ರವೂಫ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದಕಾರ್ಯಕ್ರಮದಲ್ಲಿಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು.ಶಿಕ್ಷಕಿ ಅರುಣಾಕ್ಷಿ ವಂದಿಸಿದರು.ಶಾಲಾ ಶಿಕ್ಷಕಿ ತುಷಾರ ಹಾಗೂ ಶಾಲಾ ನಾಯಕ ಸಿದ್ದೀಖ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *