ವಿಟ್ಲ: ಕಸ್ಬಾ ಗ್ರಾಮದ ಪಳಿಕೆ ಜನತಾ ಕಾಲನಿ ನಿವಾಸಿ ಶಂಕರನಾರಾಯಣ ಭಟ್ ರವರ ಮನೆ ಮೇಲೆ 12 ರಂದು ಬೆಳಗ್ಗಿನ ಜಾವ 4 ಗಂಟೆಗೆ ಬೃಹತ್ ಗಾತ್ರದ ಮರವೊಂದು ಬಿದ್ದು ಮನೆಯು ಸಂಪೂರ್ಣ ನಾಶ ವಾಗಿದೆ. ಶಂಕರನಾರಾಯಣ ಭಟ್ಟರ ಪತ್ನಿ ಮಾಜಿ ಪಂಚಾಯತ್ ಸದಸ್ಯೆ ಶಾಂತಾ ಎಸ್ ಎನ್ ಭಟ್ ಚೆಣೈಯಲ್ಲಿರುವ ಮಗಳ ಮನೆಗೆ ಹೋಗಿದ್ದು, ಭಟ್ಟರು ಬೆಳಗಿನ ಜಾವ ಬೇಗನೆ ಏಳುವ ಅಭ್ಯಾಸ ಹೊಂದಿದ್ದು, ಮನೆಯ ಹೊರಗಡೆ ಬಂದಿದ್ದ ಸಂದರ್ಭದಲ್ಲಿ ಮರ ಬಿದ್ದಿರುವುದರಿಂದ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ.

