ವಿಟ್ಲ: ರೋಟರಿ ಕ್ಲಬ್ ನ 2016-07 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಗಜಾನನ ಸಭಾ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ್ ಮತ್ತು ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಪಿ ಹೆಚ್ ಎಫ ಶೇಖರ್ ಶೆಟ್ಟ ಬೋಧಿಸಿದರು. ಮುಖ್ಯ ಆತಿಥಿಗಳಾಗಿ ಸಂತೋಷ್ ಕುಮಾರ್ ಶೆಟ್ಟಿ, ಭಾಸ್ಕರ ಶೆಟ್ಟಿ ಮತ್ತು ಪುರುಶೋತ್ತಮ ಮುಂಗ್ಲಿಮನೆ ಭಾಗವಹಿಸಿದ್ದರು.

ಡಿ ಬಿ ಅಬೂಬಕ್ಕರ್ ಸ್ವಾಗತಿಸಿದರು. ಎಸ್ ಅಬ್ದುಲ್ ರಹಿಮಾನ್ ವರದಿ ವಾಚಿಸಿದರು. ಕಿರಣ್ ಕುಮಾರ್ ವಂದಿಸಿದರು. ಈ ಸಂದರ್ಭದಲ್ಲಿ ಡಾ| ವಿ ಕೆ ಹೆಗ್ಡೆ ಸಂಪಾದಕತ್ವದ ರೋಟಾ ವಿಷನ್ ಪತ್ರಿಕೆ ಬಿಡುಗಡೆ ಹಾಗೂ ವಿವಿಧ ಸೇವಾ ಚಟುವಟಿಕೆಗಳನ್ನು ಮತ್ತು ಪ್ರತಿಭಾ ಪುರಸ್ಕಾರಗಳ್ಲು ಕ್ಲಬ್ ವತಿಯಿಂದ ನಡೆಸಲಾಯಿತು. ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ್ ಪಡಿಯಾರ್ ಮತ್ತು ಜೇಸಿಐ ಅಧ್ಯಕ್ಷ ಬಾಬು ಕೊಪ್ಪಳ ಶುಭ ಹಾರೈಸಿದರು. ಅಣ್ಣಪ್ಪ ಸಾಸ್ತಾನ್ ಕಾರ್ಯಕ್ರಮ ನಿರೂಪಿಸಿದರು. ರಶೀದ್ ವಿಟ್ಲ ಹಾಗೂ ಡಾ| ಜೆಡ್ಡು ಗಣಪತಿ ಭಟ್ ಸಹಕರಿಸಿದರು. ಜಿಎಸ್‍ಆರ್ ಜಯಕುಮಾರ್ ವೇದಿಕೆಯಲ್ಲಿದ್ದರು.
