ಬಂಟ್ವಾಳ: ದ.ಕ. ಸಹಕಾರಿ ಹಾಲು ಒಕ್ಕೂಟ ನಿಯಮಿತ ಇದರ ವ್ಯಾಪ್ತಿಗೆ ಬರುವ ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ವೀರಕಂಭ ವ್ಯಾಪ್ತಿಯ ಹೈನುಗಾರಿಕಾ ರೈತರ ಜಾನುವಾರುಗಳಿಗೆ ಸಾಮೂಹಿಕ ಜಂತುಹುಳ ನಿವಾರಣಾ ಮಾತ್ರೆಗಳನ್ನು ವೀರಕಂಭ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀಯುತ ದಿಲೀಪ ಕುಮಾರ್ ರವರು ಮೈರ ಶೇಖರ ಆಳ್ವ ರವರಿಗೆ ವಿತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳು, ಸದಸ್ಯರು ಉಪಸ್ಥಿತರಿದ್ದರು
