ಬಂಟ್ವಾಳ: ಸೋಮವಾರ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ ಮುಂಜಾನೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪಾಣೆಮಂಗಳೂರು, ಗುಡ್ಡೆಯಂಗಡಿ, ಬ್ರಹ್ಮರಕೂಟ್ಲು ಮತ್ತಿತರ ನದಿ ತೀರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಇದೇ ರೀತಿ ಮಳೆ ಮುಂದುವರಿದ್ದಲ್ಲಿ ಪ್ರವಾಹ ಭೀತಿ ಎದುರಾಗಲಿದೆ. 8.5 ಮೀಟರ್ ಅಪಾಯದ ಮಟ್ಟವಾಗಿದ್ದು 6.5 ಮೀಟರ್‍ನತ್ತ ನೀರು ನುಗ್ಗುತ್ತಿದೆ.

ಪ್ರವಾಹ ಬಂದಾಗ ನದಿ ತೀರದ ಪ್ರದೇಶಗಳು ಮುಳುಗಡೆಯಾಗಿ ಜನಜೀವನ ಅಸ್ಥವ್ಯಸ್ಥಗೊಳ್ಳುವುದು ಬಂಟ್ವಾಳದಲ್ಲಿ ಸಾಮಾನ್ಯ. ಪ್ರವಾಹ ಭೀತಿ ಇರುವುದರಿಂದ ನದಿ ತೀರದ ವಾಸಿಗಳು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಬೇಕಾಗಿದೆ. ಅಪಾಯ ಸಂಭವಿಸುವ ಮೊದಲೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗಿದೆ.
ಚಿತ್ರ .ಕಿಶೋರ್ ಪೆರಾಜೆ.


