ಕೈಕಂಬ :ಪ್ರಜ್ಞಾ ಸಲಹಾಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್ಡಬ್ಲ್ಯೂಸಿ ಯೋಜನೆಯಡಿಯಲ್ಲಿ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಕೃಕಂಬ ವಲಯ ಇದರ ಸದಸ್ಯೆಯರಿಗೆ ಕುಪ್ಪೆಪದವು ಆಶಾಕಿರಣ ಹಾಲ್ನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.

ಈ ಕಾರ್ಯಕ್ರಮಕ್ಕೆ ಮಾಜಿ ಒಂಬಡ್ಸ್ ಮೆನ್ ಹಾಗೂ ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಶೀನ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸ್ವ ಸಹಾಯ ಸಂಘಗಳು ಸದಸ್ಯೆಯರಿಗೆ ವೈಯಕ್ತಿಕ ಬೆಳವಣಿಗೆ, ಸಾಮಾಜಿಕ ಬೆಳವಣಿಗೆ, ಆರ್ಥಿಕತೆ ಬಗ್ಗೆ ತಿಳಿಯಪಡಿಸಿದರು. ಅಲ್ಲದೆ ಶಿಕ್ಷಣಾ, ಆರೋಗ್ಯ, ಜಲಸಂರಕ್ಷತೆ ಅಭಿಯಾನ, ಪರಿಸರ ಸಂರಕ್ಷಣೆ, ಇಂಗು ಗುಂಡಿ ರಚನೆ,ಪ್ಲಾಸ್ಟಿಕ್ ನಿಷೇದ, ಸೌರಶಕ್ತಿ ಅಭಿಯಾನ, ಉದ್ಯೋಗ ಖಾತ್ರಿ ಯೋಜನೆ ಇವೆಲ್ಲವುಗಳ ಬಗ್ಗೆ ಸದಸ್ಯೆಯರ ಅನಿಸಿಕೆ-ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡು ಯಶಸ್ವಿ ಕಾರ್ಯಾಗಾರ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಯೋಜನೆಯ ಸಂಯೋಜಕರಾದ ವಿಲಿಯಂ ಸಾಮ್ಯುವೆಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯೋಜನೆಯ ಮೇಲ್ವಿಚಾರಕಿ ರೇಷ್ಮಾ ಜೋಗಿ, ಕೈಕಂಬ ವಲಯದ ಸಂಯೋಜಕರಾದ ಈಶ್ವರ್ ನಾಯ್ಕ್, ಕಾರ್ಯಕರ್ತೆಯರಾದ ಪಾಲಾಕ್ಷಿ, ಸೀತಾಲಕ್ಲ್ಮೀ ಉಪಸ್ಥಿತರಿದ್ದರು. ಪ್ರಪುಲ್ಲ ವಂದನಾರ್ಪಣೆಗೈದರು.


