ವಾಮಂಜೂರು:ಇಲ್ಲಿನ ಸೈಂಟ್ರೇಮಂಡ್ಸ್ ಪದವಿ ಪೂರ್ವಕಾಲೇಜಿನಲ್ಲಿ ದಿನಾಂಕ 24.06.2016 ಶುಕ್ರವಾರದಂದು 2016-17ನೇ ಶೈಕ್ಷಣಿಕ ವರ್ಷದರಾಷ್ಟ್ರೀಯ ಸೇವಾಯೋಜನೆಯ ಕಾರ್ಯಚಟುವಟಿಕೆಯ ಉದ್ಘಾಟನಕಾರ್ಯಕ್ರಮ  ನಡೆಯಿತು.SONY DSC

ಉದ್ಘಾಟಕರಾಗಿ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದಕಾಲೇಜಿನ ಸ್ನಾತಕೋತ್ತರ ವಿಭಾಗದಉಪನ್ಯಾಸಕರಾದ ಶ್ರೀ ಹರಿಪ್ರಸಾದ್ರವರು ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರುರಾಷ್ಟ್ರೀಯ ಸೇವಾ ಯೋಜನೆಜೀವನದ ಮೌಲ್ಯಗಳನ್ನು ತಿಳಿಕೊಡುವುದರ ಜೊತೆಗೆ ಸಮಾಜಮುಖಿ ಬದುಕನ್ನುರೂಪಿಸಲು ಸಹಕರಿಸುತ್ತದೆಎಂದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲೆ ವಂದನೀಯ ಭಗಿನಿ. ಸಾಧನರವರು ವಹಿಸಿ ಮಾತನಾಡಿರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಬದುಕಿನಲ್ಲಿ ಸಾಮಜಿಕ ಕಳಕಳಿಯನ್ನು ಹೆಚ್ಚಿಸುವಲ್ಲಿ ನಿರ್ಣಯಕ ಪಾತ್ರ ವಹಿಸುತ್ತದೆಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಶ್ರೀ ದಿನಕರ್ಅಂಚನ್, ಶ್ರೀ ಜಯರಮ್ ಮತ್ತು ಕು. ವಿಲ್ಮಾ ಹಾಗೂ ಎಲ್ಲಾಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *