ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಮತ್ತೊಮ್ಮೆ ಕಳ್ಳರ ಹಾವಳಿ ಶುರುವಿಟ್ಟಿದೆ. ಕಳೆದ ತಡರಾತ್ರಿ ಮೊಬೈಲ್ ಅಂಗಡಿಯೊಂದಕ್ಕೆ ಗೋಡೆ ಕೆಡವಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ದರೋಡೆಗೈದಿದ್ದಾರೆ. ಮೊಬೈಲ್ ಗಳ ಜೊತೆಗೆ ಸಿಸಿಟೀವಿ, ಲ್ಯಾಪ್ ಟಾಪ್ ಗಳನ್ನೂ ಕದ್ದೊಯ್ದಿದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರೋ ಅಂಗಡಿ ಮಾಲಿಕ ಪಣಂಬೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆಯೇ ಈ ಅಂಗಡಿಯ ಮೇಲೆ ಎರಡು ಬಾರಿ ಕಳ್ಳತನ ಹಾಗೂ ಮೂರು ಬಾರಿ ಕಳ್ಳತನ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಎಪಿಎಂಸಿ ಸ್ವಾಮ್ಯದ ಈ ಕಟ್ಟಡದಲ್ಲಿ ಹಲವಾರು ಮಳಿಗೆಗಳಿದ್ದು , ಕೆಲವೊಂದು ಮಳಿಗೆಗಳು ಕಳ್ಳರ ಕಾಕದೃಷ್ಟಿಗೆ ಈ ಹಿಂದೆಯೇ ಹಲವು ಬಾರಿ ಗುರಿಯಾಗಿದೆ. ಇದೀಗ ದರೋಡೆಗೊಳಗಾದ ಮೊಬೈಲ್ ಅಂಗಡಿ ಮಾಲಿಕ ಸುರಕ್ಷತೆ ದೃಷ್ಟಿಯಿಂದ ಹಾಕಿದ್ದ ಸೀಸಿಟೀವಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಪಣಂಬೂರು ಪೊಲೀಸರ ನಿರ್ಲಕ್ಷ್ಯ ಹಾಗೂ ಎಪಿಎಂಸಿ ಭದ್ರತಾ ಲೋಪದಿಂದಾಗಿ ಪದೇ ಪದೇ ಕಳ್ಳತನವಾಗಿತ್ತಿದ್ದರು ಕಡಿವಾಣ ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ..

IMG-20160624-WA0006 IMG-20160624-WA0007

By Suddi9

Leave a Reply

Your email address will not be published. Required fields are marked *