ಬದಿಯಡ್ಕ: ನಾಡೋಜ ದಿ.ಕಯ್ಯಾರ ಕಿಂಞಿಣ್ಣ ರೈಯವರ ಸ್ಮರಣೆಗೆ ಹಾಗೂ ಅವರ ಕೃತಿಗಳ ಕುರಿತಾದ ಅಧ್ಯಯನಕ್ಕೆ ಬದಿಯಡ್ಕದ ಕಯ್ಯಾರರ ಸ್ವಂತ ನಿವೇಶನದಲ್ಲಿ ಕೇಂದ್ರ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ಪ್ರಸ್ತುತ ವರ್ಷದ ಯೋಜನೆಯಲ್ಲಿ ನಿಧಿ ಮೀಸಲಿರಿಸಿದ್ದು,ಕೇಂದ್ರ ಸ್ಥಾಪನೆಯ ನಿಮಿತ್ತ ಮಂಗಳವಾರ ಬದಿಯಡ್ಕಕ್ಕೆ ಜಿಲ್ಲಾ ಪಂಚಾಯತ್ ಅಧಿಕೃತರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಕಾಸರಗೋಡು ಜಿಲ್ಲಾ ಪಂಚಾಯತ್ 2016-17ನೇ ಯೋಜನೆಯಲ್ಲಿ 1.50 ಕೋಟಿ ರೂ.ಗಳ ಬೃಹತ್ ಮೊತ್ತದ ಬಜೆಟ್ ನಲ್ಲಿ ಬದಿಯಡ್ಕದಲ್ಲಿ ಕಯ್ಯಾರ ಕಿಂಞಿಣ್ಣ ರೈ ಅದ್ಯಯನ ಕೇಂದ್ರ ನಿರ್ಮಾಣಕ್ಕೆ ಯೋಜನೆಯಿರಿಸಿದೆ.ಈ ಕೇಂದ್ರದ ಮೂಲಕ ತುಳು ಹಾಗೂ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಅವಕಾಶ ನೀಡಲಿದ್ದು,ಜೊತೆಗೆ ಕಯ್ಯಾರರ ಕೃತಿ,ಸಾಧನೆ,ಬದುಕಿನ ಕುರಿತು ಅಧ್ಯಯನ ನಡೆಸಲು ಅವಕಾಶವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.

bdk_21 june_01(1) ನಿವೇಶನ ಎಲ್ಲಿ:
ಅಧ್ಯಯನ ಕೇಂದ್ರದ ನಿಮರ್ಾನಕ್ಕೆ ಈಗಾಗಲೇ ಕಯ್ಯಾರರ ಕುಟುಂಬ ವರ್ಗ 30 ಸೆಂಟ್ ನಿವೇಶನವನ್ನು ಸ್ವಂತ ಆಸ್ತಿಯಿಂದ ನೀಡುವ ಬಗ್ಗೆ ಈ ಹಿಂದೆಯೇ ವಾಗ್ದಾನ ನೀಡಿತ್ತು.ಅದರಂತೆ ಕವಿ ನಿವಾಸ ಕಲ್ಲಕಳೆಯದ ಕವಿತಾ ಕುಟೀರದ ಸಮೀಪದ ಬತ್ತೇರಿ ಎಂಬ ಪ್ರದೇಶದಲ್ಲಿ ರಬ್ಬರ್ ತೋಟದ ಸನಿಹದ 30 ಸೆಂಟ್ ಸ್ಥಳವನ್ನು ಅಧ್ಯಯನ ಕೇಂದ್ರ ನಿಮರ್ಾಣಕ್ಕೆ ಮೀಸಲಿರಿಸಲಾಗಿದ್ದು,ಸ್ಥಳವನ್ನು ದಾನ ರೂಪದಲ್ಲಿ ಕುಟುಂಬವು ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸುವುದು.
ಈ ನಿಟ್ಟಿನಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್,ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ,ಇ.ಪದ್ಮಾವತಿ,ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್,ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಜಿಲ್ಲಾ ಪಂಚಾಯತ್ ಕಾರ್ಯದಶರ್ಿ ಇ.ಪಿ.ರಾಜಮೋಹನ್,ಮಾಯಿಪ್ಪಾಡಿ ಡಯಟ್ ಕೇಂದ್ರದ ಪ್ರಾಧ್ಯಾಪಕ ಯತೀಶ್ ಕುಮಾರ್ ರೈ,ಅನ್ವರ್ ಓಝೋನ್,ಪ್ರದೀಪ್ ರೈ ಕಯ್ಯಾರ್,ಹರೀಶ್ ಮೊದಲಾದವರು ಭೇಟಿ ನೀಡಿದರು.
ಶೀಘ್ರ ಅಧ್ಯಯನ ಕೇಂದ್ರಕ್ಕಿರುವ ಸ್ಥಳವನ್ನು ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸುವ ಕ್ರೀಯೆಗೆ ಚಾಲನೆ ನೀಡಲಾಗುವುದೆಂದು ಈ ಸಂದರ್ಭ ತಂಡ ತಿಳಿಸಿತು.
ಕೋಟ್ಸ್: ಗಡಿನಾಡಿನ ಕನ್ನಡ ಹೋರಾಟಗಾರ,ಸಾಹಿತಿ,ಶ್ರೇಷ್ಠ ಅಧ್ಯಾಪಕ,ವಿಶಿಷ್ಟ ರಾಜಕಾರಣಿ ಕಯ್ಯಾರರ ಸ್ಮೃತಿ ಹಾಗೂ ಕನ್ನಡ,ತುಳು ಭಾಷೆಗಳ ಅಧ್ಯಯನಕ್ಕೆ ಅವಕಾಶವಾಗುವಂತೆ ಯೋಜನೆ ತಯಾರಾಗುತ್ತಿದ್ದು,ಹಂತಹಂತವಾಗಿ ಕೇಂದ್ರ ರಚನೆಯಾಗಲಿದೆ.ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಜಿಲ್ಲೆಯ ಜನತೆಯ ಪೂರ್ಣ ಬೆಂಬಲದ ನಿರೀಕ್ಷೆ ಇದ್ದು,ಸದ್ಬಳಕೆಗೆ ಆಗಬೇಕೆಂಬುದು ನಮ್ಮ ನಿರೀಕ್ಷೆ. ಎಜಿಸಿ ಬಶೀರ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ.

By suddi9

Leave a Reply

Your email address will not be published. Required fields are marked *