ವಿಟ್ಲ ಮಾದರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ 21 ಶಿಕ್ಷಣಾಧಿಕಾರಿಗಳ ಕಛೇರಿ , ಬಂಟ್ವಾಳ ಹಾಗೂ ವಿಟ್ಲ ಮಾದರಿ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ಮಾದರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಾಯಿತು. ವಿಟ್ಲ ಪಟ್ಟಣ ಪಂಚಾಯತ್ನ ಕೌನ್ಸಿಲರ್ ಜಯಂತ ಇವರು ಕಾರ್ಯಕ್ರಮ ಉದ್ಘಾಟಿಸಿದರು.

yoga dina 2016, (1) (1)

yoga dina 2016, (2)

ದಿನನಿತ್ಯ ಯೋಗಾಭ್ಯಾಸ ಮಾಡುವುದರಿಂದಾಗುವ ಪ್ರಯೋಜನದ ಬಗ್ಗೆ ಮೈತ್ರೇಯಿ ಗುರುಕುಲದ ಯೋಗ ಶಿಕ್ಷಕಿ ಪ್ರೀತಿಕಾ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ನಾರಾಯಣ ಗೌಡ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀ ಶಿವರಾಂ ಭಟ್, ವಿಟ್ಲ ಮಾದರಿ ಶಾಲೆಯ ಗೌರವಾಧ್ಯಕ್ಷರಾದ ಶ್ರೀ ಸುಬ್ರಾಯ ಪೈ, ಶಾಲಾಭಿವೃದ್ಧಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ, ಹಾಗೂ ಆರ್ ಕೆ ಆರ್ಟ್ಸ್ನ ರಾಜೇಶ್ ವಿಟ್ಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಟೇಶ್ ವಿಟ್ಲ, ಮೈತ್ರೇಯಿ ಗುರುಕುಲದ ತೇಜಸ್ವಿನಿ, ಸಾಯಿಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕವೃಂದ ಮೊದಲಾದವರು ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಮೋಹನ್ ರಾಜ್ ಸ್ವಾಗತಿಸಿ ಸಹಶಿಕ್ಷಕರಾದ ದಯಾನಂದ ಎನ್, ವಂದಿಸಿದರು. ಸಹಶಿಕ್ಷಕರಾದ ವಿಶ್ವನಾಥ ಬಿ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *