ಕಲ್ಲಡ್ಕ:ಭಾರತ ಅನೇಕ ಆಕ್ರಮಣಗಳನ್ನು ಎದುರಿಸಿದ ರಾಷ್ಟ್ರ. ಈ ರೀತಿ ಆಕ್ರಮಣಗಳಾದ ಸಂದರ್ಭದಲ್ಲಿ ಅನೇಕ ಮಹಾಪುರುಷರು ಈ ರಾಷ್ಟ್ರದ ರಕ್ಷಣಾಕಾರ್ಯವನ್ನು ನಡೆಸಿದ್ದಾರೆ. ಈ ರೀತಿ ಧರ್ಮ ರಾಷ್ಟ್ರದ ರಕ್ಷಣೆಗೆ ಹೋರಾಟ ಮಾಡಿದ ವೀರದೊರೆ ಶಿವಾಜಿ, ತಾಯಿಯಿಂದ ಪ್ರೇರಿತನಾಗಿ ಸ್ವಾರ್ಥರಹಿತವಾಗಿ ಸಮಾಜದ ಹಿತದೃಷ್ಟಿಯಿಂದ ಶಿವಾಜಿಯ ಹೋರಾಟ ನಡೆದಿದೆ. ಇಂತಹ ಸಮಾಜಮುಖಿ ಕಾರ್ಯಗಳು ನಮಗೆ ಪ್ರೇರಣೆಯಾಗಬೇಕು. ಈ ರೀತಿಯ ಚಿಂತನೆಯುಳ್ಳ ವಿದ್ಯಾರ್ಥಿಗಳನ್ನು ಶ್ರೀರಾಮ ವಿದ್ಯಾಕೇಂದ್ರ ನಡೆಸುತ್ತಿದೆ. ರಾಷ್ಟ್ರಕ್ಕಾಗಿ ಬದುಕೋಣ ಎಂಬ ಚಿಂತನೆ, ಕಾರ್ಯದೊಂದಿಗೆ ನಮ್ಮಜೀವನ ಸಾಗಲಿ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕರು, ಡಾ| ಪ್ರಭಾಕರ ಭಟ್, ತಿಳಿಸಿದರು.
agatha
ಅವರು ಶ್ರೀರಾಮ ಪ್ರೌಢಶಾಲಾ ವಿಭಾಗದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಭಾವನಾತ್ಮಕ ಕಾರ್ಯಕ್ರಮವಾದ ಆಗತ-ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ಆಕಾಶ್ರಾಜ್ ದಂತವೈದ್ಯರು, ಉಡುಪಿ ಮಾತನಾಡಿ ಶ್ರೀರಾಮ ವಿದ್ಯಾಕೇಂದ್ರ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಭಾರತೀಯ ಸಂಸ್ಕಾರಭರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶ್ರೇಯಸ್ಕರ ಕಾರ್ಯವಾಗಿದೆ. ಭಾರತೀಯ ಪ್ರತಿಯೊಂದು ಸಂಸ್ಕಾರಗಳು ವೈಜ್ಞಾನಿಕ ದೃಷ್ಟಿಯಿಂದ ಕೂಡಿದೆ. ಇಂತಹ ಮೌಲ್ಯಗಳು ನಿಮ್ಮೆಲ್ಲರ ಜೀವನದಲ್ಲಿ ಸಹಕರಿಸುವ, ಬೆಳೆಸುವ ಕಾರ್ಯವನ್ನು ನಡೆಸುತ್ತದೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿತೇಂದ್ರರಾವ್, ಸಂಗೀತ ನಿರ್ದೆಶಕರು, ಕಿರುತೆರೆ ನಿರ್ದೇಶಕರು, ಸಂಚಾರ ಸುಗಮ ವೇದಿಕೆ ಟ್ರಸ್ಟ್ ಅಧ್ಯಕ್ಷರು ಭಾಗವಹಿಸಿದರು.

ವೇದಿಕೆಯಲ್ಲಿ ವಿದ್ಯಾಕೇಂದ್ರದ, ಅಧ್ಯಕ್ಷರು ನಾರಾಯಣ ಸೋಮಯಾಜಿ, ಡಾ| ಕಮಲಾ ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ಮಾಧವ ರಮೇಶ್.ಎನ್ ಮುಖ್ಯ ಶಿಕ್ಷಕರು ಶ್ರೀರಾಮ ಪ್ರೌಢಶಾಲೆಕಲ್ಲಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂತನವಾಗಿ ಪ್ರೌಢಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆಗೈದು ಹಿರಿಯರ ಆಶೀರ್ವಾದ ಪಡೆದರು.

ರಂಜನ್ 10 ಚ್ಯವನ ವೈಯಕ್ತಿಕಗೀತೆ ಹಾಡಿದರು. ಕಾರ್ಯಕ್ರಮವನ್ನು ಸಂತೃಪ್ತಿ 10 ಭಾರ್ಗವ ನಿರೂಪಿಸಿ, ಹರ್ಷಿತಾ 9 ಭಾಸ್ಕರ ಸ್ವಾಗತಿಸಿ, ರಂಜನ 10 ಚ್ಯವನ ವಂದಿಸಿದರು

By suddi9

Leave a Reply

Your email address will not be published. Required fields are marked *