ಕೈಕಂಬ: ಯಕ್ಷಕಲಾ ಕ್ಷೇತ್ರದ ಅತ್ಯಪೂರ್ವ ಕಲಾವಿದ ಬಿ.ಮೋಹನ ಕುಮಾರ್ ಅಮ್ಮುಂಜೆಯವರ ಯಕ್ಷಗಾನ ಕಲಾ ಬದುಕಿಗೆ ಇದು ಬೆಳ್ಳಿಹಬ್ಬದ ಸಂಭ್ರಮ. ಗೆಜ್ಜೆಕಟ್ಟಿ ಯಕ್ಷರಂಗ ಪ್ರವೇಶಿಸಿದ ಕ್ಷಣದಿಂದ ಸತತ ಇಪ್ಪತ್ತೈದು ವರ್ಷಗಳಲ್ಲಿ ಅವರು ಕಟೀಲು ಶ್ರೀ ದುರ್ಗಪರಮೇಶ್ವರಿ ದೇವಳದಿಂದ ಪ್ರವರ್ತಿತ ಯಕ್ಷಗಾನ ಮಂಡಳಿಯಲ್ಲೇ ಸಾರ್ಥಕ್ಯವನ್ನು ಅನುಭವಿಸುವುದು ವಿಶೇಷ ಈ ಪ್ರಯುಕ್ತ ಜೂ. 25 ಶನಿವಾರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಅಮ್ಮುಂಜೆ ಮೋಹನ ಕುಮಾರ್ ಯಕ್ಷಗಾನ ಕಲಾ ಬದುಕಿನ ಬೆಳ್ಳಿಹಬ್ಬ ‘ಅಮ್ಮುಂಜೆ ರಜತಪರ್ವ’ ಸಂಪನ್ನಗೊಳ್ಳಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ರಜತ ಪರ್ವ ಸಮಿತಿಯ ಮಾರ್ಗದರ್ಶಕ ಶ್ರೀ ಹರಿನಾರಯಣ ದಾಸ ಅಸ್ರಣ್ಣ ಅವರು ತಿಳಿಸಿದರು.
ಜೂ. 25 ಮದ್ಯಾಹ್ನ 1 ಕ್ಕೆ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಮ್ಮುಂಜೆ ಮೋಹನ ಕುಮಾರ್ ಹಾಗೂ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರುಗಳಿಂದ ಗೆಜ್ಜೆ ಸೇವೆಯೋಂದಿಗೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಪ್ರಾರಂಭಗೂಳ್ಳಲಿದೆ.

ಮದ್ಯಾಹ್ನ 1.30 ಕ್ಕೆ ಅಮ್ಮುಂಜೆ ಕಲಾಯಾನದ ರೂವಾರಿಗಳಾದ ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ, ಶ್ಯಾಮಲ ಗಣಪತಿ ಶಾಸ್ತ್ರಿ, ದಂಪತಿಯಿಂದ ಕಾರ್ಯಕ್ರಮ ಉದ್ಘಾಟನೆ.
ಹಳೆ ಬೇರು- ಹೊಸ ಚಿಗುರು-‘ಯಕ್ಷಗಾನಮೃತ’:-
ಮದ್ಯಾಹ್ನ 2 ರಿಂದ ತೆಂಕು ಹಾಗು ಬಡಗತಿಟ್ಟಿನ ಹಿರಿಯ ಹಾಗೂ ಉದಯೋನ್ಮುಕ ಪ್ರತಿಭಾನ್ವಿತ ಭಾಗವತರುಗಳಿಂದ ಯಕ್ಷಗಾನ ಗಾನಾಮೃತ ಕಾರ್ಯಕ್ರಮ ನಡೆಯಲಿದ್ದು, ತೆಂಕುತಿಟ್ಟಿನ ಭಾಗವತರುಗಳಾದ ಬಲಿಪ ನಾರಾಯಣ ಭಾಗವತ, ಅಗರಿ ರಘರಾಮ ಭಾಗವತ, ಪಟ್ಲ ಸತೀಶ ಶೆಟ್ಟಿ ಹಾಗೂ ಬಡಗುತಿಟ್ಟಿನ ನೆಟ್ಟೂರು ನಾರಾಯಣ ಭಾಗವತ ತೋನ್ಸೆ ಜಯಂತಕುಮಾರ್, ಜನ್ಸಾಲೆ ರಾಘವೇಂದ್ರ ಅಚಾರ್ಯ ಅವರುಗಳು ಭಾಗವಹಿಸಲಿದ್ದಾರೆ.
ಸಂಜೆ 4 ರಿಂದ ‘ಶ್ರೀ ಕೃಷ್ಣ ಲೀಲಾಮೃತ’ ಯಕ್ಷಗಾನ ಬಯಲಾಟ ನಡೆಯಲಿದೆ.
100 ಮಂದಿಗೆ ಸನ್ಮಾನ:-
ಸಂಜೆ 6.30 ರಿಂದ 9.30ರವರೆಗೆ ‘ರಜತ ಪರ್ವ ಸಭಾ ಕಾರ್ಯಕ್ರಮ ಜರುಗಲಿದ್ದು ಕಲಾವಿದರೂ ಮೋಹನ ಅಮ್ಮುಂಜೆ ಕಲಾ ಜೀವನದ ಪೋಷಕರೂ ಸೇರಿದಂತೆ 100 ಮಂದಿಯನ್ನು ಗೌರವಿಸಲಾಗುವುದು.
ಇದೇ ಸಂದರ್ಭ ಅಮ್ಮುಂಜೆ ಮೋಹನ ಅವರ ಪ್ರಖ್ಯಾತ ಹತ್ತು ಪಾತ್ರಗಳ ‘ಅಮ್ಮುಂಜೆ ದಶಶ್ರೀ’ ಸಿಡಿ ಬಿಡುಗಡೆ, ಗುರುವಂದನೆ, ಗೌರವಾರ್ಪಣೆ, ಅಮ್ಮುಂಜೆ ಮೋಹನ ಕುಮಾರ್ ದಂಪತಿಗೆ ಅಭಿಮಾನಿ ಬಳಗದಿಂದ ರಜತಾಭಿನಂದನೆ ಹಾಗೂ ಅಮ್ಮುಂಜೆ ಸಾಕ್ಷ್ಯಾ ಚಿತ್ರ ಮೋಹನಾಂತರಂಗ ಪ್ರದರ್ಶನ, ರಾತ್ರಿ 10 ರಿಂದ ಬೆಳಿಗ್ಗೆ 7ರ ತನಕ ‘ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ, ಕೃಷ್ಣಾರ್ಜುನ, ಸುಧನ್ವ ಮೋಕ್ಷ, ಜಾಂಬವತಿ ಕಲ್ಯಾಣ ಪ್ರಸಂಗಗಳು ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿದ್ದು 100ಕ್ಕೂ ಹೆಚ್ಚು ಕಲಾವಿದರು ರಂಗಸ್ಥಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಜತ ಪರ್ವ ಸಮಿತಿಯ ಸಂಚಾಲಕ ಅಮ್ಮುಂಜೆ ಅವರ ಅಣ್ಣ ಜನಾರ್ದನ ಅಮ್ಮುಂಜೆ ಸುದ್ಧಿ ಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರ ನೀಡಿದರು. ರಜತ ಪರ್ವ ಸಮಿತಿಯ ಅಧ್ಯಕ್ಷ ರಾಜೀವ್ ಕೈಕಂಬ, ಗೌರವ ಕಾರ್ಯದರ್ಶಿ ನಟೇಶ್ ವಿಟ್ಲ, ರವಿ ಅಲೆವೂರಾಯ, ಸತೀಶ್ ಭಟ್ ಬೆಂಗಳೂರು, ಶತೀಶ್ ಭಂಡಾರಿ ಕಟೀಲ್ , ಮೋಹನ್ ಅಮ್ಮುಂಜೆ ಅವರುಗಳು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ಧರು.



