ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ನೂತನ ಅಧ್ಯಕ್ಷರಾಗಿ ಬಿ.ಸತೀಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಭಾನುವಾರ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಯಶೋಧಾ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ್ ನೇರಂಬೋಳು, ಕೋಶಾಧಿಕಾರಿಯಾಗಿ ಹರಿಪ್ರಸಾದ್, ಜತೆ ಕಾರ್ಯದರ್ಶಿಯಾಗಿ ಸುಕುಮಾರ್ ಮತ್ತು ಯೋಗೀಶ್ ಮಿತ್ತಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಮದ್ರೋಳಿ, ಕ್ರೀಡಾ ಕಾರ್ಯದರ್ಶಿಯಾಗಿ ವಿಠಲ ಮಯ್ಯರಬೈಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತಿ ಹಾಗೂ ರಾಧಾಕೃಷ್ಣ ಇವರುಗಳನ್ನು ಆಯ್ಕೆ ಮಾಡಲಾಯಿತು.

BTW_JUNE14_1 SATHISH KULALA

BTW_JUNE14_1B MANOHAR
ಸೇವಾದಳದ ದಳಪತಿಯಾಗಿ ಯಾದವ ಅಗ್ರಬೈಲು ಹಾಗೂ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಜಲಜಾಕ್ಷಿ ಇವರು ಆಯ್ಕೆಯಾದರು. ಕೇಶವ ಮಾಸ್ತರ್, ಎ. ಲಿಂಗಪ್ಪ ಕೈಕುಂಜೆ, ಸದಾಶಿವ ಬಂಗೇರ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಲಿಂಗಪ್ಪ ಮಾಸ್ತರ್, ಡಿ.ಎಂ.ಕುಲಾಲ್, ಮಾಧವ ಕುಲಾಲ್, ಪ್ರೇಮ ಪೊಸಳ್ಳಿ, ಬಿ. ಕೃಷ್ಣಪ್ಪ, ಸುಂದರ್ ಬಿ., ಬಿ. ಲಕ್ಷ್ಮಣ್ ಸಾಲ್ಯಾನ್, ದಾಮೋದರ್ ಏರ್ಯ ಇವರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು. ಅಧ್ಯಕ್ಷ ಕೇಶವ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ  ದಾಮೋದರ್ ಏರ್ಯ ವಂದಿಸಿದರು.

By Suddi9

Leave a Reply

Your email address will not be published. Required fields are marked *