ವಿಟ್ಲ: ಜೆಸಿಐ ವತಿಯಿಂದ ವಿಟ್ಲದ ಬಿ ಸಿ ಎಂ ವಿದ್ಯಾರ್ಥಿ ನಿಲಯಕ್ಕೆ ನ್ಯಾಪ್ಕಿನ್ ಬರ್ನರ್ ಯಂತ್ರವನ್ನು ನೀಡಲಾಯಿತು. ಜೇಸಿ ಭಾರತದ ಅಧ್ಯಕ್ಷೆ ಜೇಸಿ ಸೆನೆಟರ್ ರಾಜಶ್ರೀ ಭಜೆಯವರು ಯಂತ್ರವನ್ನು ನಿಲಯದ ಮೇಲ್ವಿಚಾರಕಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
