ಮೂಡುಬಿದಿರೆ: ಇಲ್ಲಿಮ ಆಚಾರಿಕೇರಿ( ಅಕ್ಕಸಾಲಿಗ ಕೇರಿ)ಯಲ್ಲಿನ ಗುರುಕಾಳಿಕಾಂಬ ದೇವಸ್ಥಾನದ ವಠಾರದಲ್ಲಿರುವ ಹನುಮಂತಗುಡಿಗೆ ಯಾರೋ ದುಷ್ಕಮರ್ಿಗಳು ಬುಧವಾರ ರಾತ್ರಿ ಮಸಾಲ ಪದಾರ್ಥವನ್ನು ಎರಚಿದ್ದಾರೆ.
ಜೈನಪೇಟೆ ಸಮೀಪವಿರುವ ಗುರುಕಾಳಿಕಾಂಬ ದೇವಸ್ಥಾನದಿಂದ ಕೆಲವೇ ಅಂತರ ದೂರದಲ್ಲಿರುವ ಹನುಮಂತ ಗುಡಿಯನ್ನು ದುಷ್ಕಮರ್ಿಗಳು ತಮ್ಮ ವಿಕೃತ ಕೃತ್ಯಕ್ಕೆ ಬಳಸಿದ್ದಾರೆ. ಗುರುವಾರ ಬೆಳಿಗ್ಗೆ 7.30ರ ವೇಳೆಗೆ ಪುರೋಹಿತ ರಕ್ಷಿತ್ ದೇವಸ್ಥಾನದ ಪೂಜೆ ಮುಗಿಸಿ, ಹನುಮಂತ ಗುಡಿಗೆ ಪೂಜೆ ಸಲ್ಲಿಸಲು ಬಂದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಕಿಟಕಿ ಮಾದರಿಯಲ್ಲಿರುವ ಗುಡಿಯ ಸಣ್ಣ ಬಾಗಿಲಿನ ಮೂಲಕ ಮಸಾಲ ಪದಾರ್ಥವನ್ನು ಎರಚಲಾಗಿದ್ದು ಬಾಗಿಲು, ಹನುಮಂತ ವಿಗ್ರಹ, ಪೂಜಾ ಪರಿಕರ, ಗೋಡೆಯ ಮೇಲೆ ಪದಾರ್ಥ ಕಂಡುಬಂದಿದೆ. ಗುಡಿಯ ಸುತ್ತಲೂ ಮಸಾಲ ಪದಾರ್ಥವನ್ನು ಎರಚಲಾಗಿದೆ. ಪದಾರ್ಥವನ್ನು ತರಲಾದ ಪ್ಲಾಸ್ಟಿಕ್ ಚೀಲವು ಸ್ಥಳದಲ್ಲಿ ಸಿಕ್ಕಿದೆ. ಮೂಡುಬಿದಿರೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಪ್ರಮುಖರು ಘಟನೆಯನ್ನು ಖಂಡಿಸಿದ್ದಾರೆ.




