ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ದಾನಿಗಳಾದ ಜೇಸಿಐ ವಿಟ್ಲ, ರೋಟರಿಕ್ಲಬ್ ವಿಟ್ಲ, ಸ್ಟೈಲ್ ಪಾರ್ಕ್  ವಿಟ್ಲ, ಆರ್ ಹೆಚ್ ಸೆಂಟರ್ ಪುತ್ತೂರು, ವಿಠಲ ಪ್ರೌಢ ಶಾಲೆಯ ಅಧ್ಯಾಪಕ ಮತ್ತು ನೌಕರ ವೃಂದ ಕನಕಶ್ರೀ ಯುವಕ ಮಂಡಲ ಹಾಗೂ ಕನಕ ಶ್ರೀ ಮೊಗೇರ ವಿದ್ಯಾರ್ಥಿ  ಸಂಘಟನೆ ಇವರು ಕೊಡ ಮಾಡಿದ ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವು ಬುಧವಾರ  ಶಾಲಾ ಸಭ ಭವನದಲ್ಲಿ ನಡೆಯಿತು.SHV_4773

SHV_4770

ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ನಿಕಟ ಪೂರ್ವ ಅಧ್ಯಕ್ಷ ಮೋಹನ ಮೈರ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ವಸಂತ ಶೆಟ್ಟಿ, ದೈಹಿಕ ಶಿಕ್ಷಕಿ ಮಲ್ಲಿಕಾ ಹೆಗ್ಡೆ, ಭಾಸ್ಕರ ಶೆಟ್ಟಿ ಅಧ್ಯಾಪಕರು, ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು. 20 ಸಮವಸ್ತ್ರಗಳನ್ನು ಮತ್ತು 63 ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿ ಪ್ರಸ್ತಾವಿಸಿದರು. ಶಿಕ್ಷಕ ಸಿ ಹೆಚ್ ಸುಬ್ರಹ್ಮಣ್ಯ ಭಟ್ ವಂದಿಸಿದರು. ರಾಜಶೇಖರ್ ನಿರೂಪಿಸಿದರು. ರಮೇಶ್ ಮತ್ತು ವೀಣಾ ಸಹಕರಿಸಿದರು

By suddi9

Leave a Reply

Your email address will not be published. Required fields are marked *