ಬಂಟ್ವಾಳ:ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ (ರಿ) ಅಬ್ಬೆಯಮಜಲು ಕರ್ಬೆಟ್ಟು ನರಿಕೊಂಬು ಇವರ ವತಿಯಿಂದ 2016-17ನೇ ಸಾಲಿಗೆ ತೆಂಕುತಿಟ್ಟು ಹಿಮ್ಮೇಳ ಮತ್ತು ನಾಟ್ಯ ಕಲಿಯುವರಿಗೆ ಹೊಸ ತರಗತಿಗಳು ಮೊಗರ್ನಾಡು ಶ್ರೀ ಲಕ್ಮೀ ನರಸಿಂಹ ದೇವಸ್ಥಾನದ ಪ್ರಹ್ಲಾದ ಮಂಟಪದಲ್ಲಿ ಪ್ರತಿ ಮಂಗಳವಾರ ಜೂನ್ 6ರಿಂದ ಸಾಯಂ3.30ರಿಂದ ಪ್ರಾರಂಭವಾಗಲಿದೆ.

images

ಆಸಕ್ತರು ನಿರ್ದೇಶಕ ಮೊಗರ್ನಾಡು ಡಾ| ಸುಬ್ರಹ್ಮಣ್ಯ ಭಟ್ ವಿಜಯ ಕ್ಲಿನಿಕ್ ಇಲ್ಲಿ ತಮ್ಮ ಹೆಸರನ್ನು ನೊಂದಾಯಿಸಬಹುದು.  ಹಿಮ್ಮೇಳ ತರಗತಿಯನ್ನು ಹಿರಿಯ ಕಲಾವಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ನಾಟ್ಯ ತರಗತಿಯನ್ನು ಕಾರ್ಕಳದ ಶ್ರೀ ವತ್ಸ ಅವರು ನಡೆಸಿಕೊಡುತ್ತಾರೆ.  ಆಸಕ್ತರು ಸಂಚಾಲಕ ಕೃಷ್ಣ ಭಟ್  ದೂರವಾಣಿ ಸಂಖ್ಯೆ 9448502304  ಅವರನ್ನು ಸಂಪರ್ಕಿಸಬಹುದು

By suddi9

Leave a Reply

Your email address will not be published. Required fields are marked *