ಬಂಟ್ವಾಳ : ವೀಣಾಧಾರಿಣಿ ಕಲಾ ಯುವಕ ಸಂಘ (ರಿ) ಇದರ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮವು ಇತ್ತಿಚೇಗೆ ಜರುಗಿತು. ಸಮಿತಿಯ ಅದ್ಯಕ್ಷರಾದ ಜಿ.ಆನಂದ ಸಭೆಯ ಅಧ್ಯಕ್ಷತೆಯನ್ನುವಹಿಸಿ ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿದರು.
ಸುಮಾರು 125ರಷ್ಟು ಕನ್ನಡ ಮಾದ್ಯಮ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಿದರು. ಕುಮಾರಿ ಅನಿಶಾ ಮತ್ತು ವಿಜಯ ಪ್ರಾರ್ಥನೆಯೊಂದಿಗೆ ಬಿ.ಬೋಜ ಸರಳಪಾದೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು ಕಾರ್ಯದರ್ಶಿ ಗೋಪಾಲ್ ಭಂಡಾರಿಬೆಟ್ಟು ವಿಧ್ಯಾರ್ಥಿಗಳ ಪಟ್ಟಿ ವಾಚಿಸಿದರು ಕಾರ್ಯಕ್ರಮದಲ್ಲಿ ಸದಸ್ಯರಾದ ಕೇಶವ ಮೂಲ್ಯ, ಸದಾಶಿವ ನ್ಯಾಕ್,ಹೇಮೇಂದ್ರ.ಬಿ,ಯಶವಂತ್ ಕುಲಾಲ್, ಸಂಜೀವಕೊಟ್ಟಾರಿ,ಮೋಹನ್ ಭಂಡಾರಿ,ರಾಜೇಶ್ ಕಲ್ಲಗುಡ್ಡೆ, ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
