ಸುದ್ದಿ9 ಕೈಕಂಬ: ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕನಿಗೆ ಈಚರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಗಂಬೀರ ಗಾಯಗೊಂಡ  ಘಟನೆ  ಇಂದು ಬೆಳ್ಳಂಬೆಳಗ್ಗೆ 8.25ರ ವೇಳೆಗೆ ಗುರುಪುರದಲ್ಲಿ ಸಂಭವಿಸಿದೆ. ಗುರುಪುರದ ಕಡಿದಾದ ರಸ್ತೆಯಿಂದಾಗಿ ಇಲ್ಲಿ ಅಪಘಾತ ಹೆಚ್ಚಾಗುತ್ತಲೇ ಬರುತ್ತಿದ್ದು, `ಗುರುಪುರ ಡೇಂಜರ್’ ಆಗಿ ಪರಿಣಮಿಸಿದೆ. ಘಟನೆಯಿಂದ ಆಕ್ರೋಶಿತ ಜನರು ಘಟನೆಗೆ ಕಾರಣವಾದ ಈಚರ್ ಲಾರಿಯ ಗ್ಲಾಸ್ ಪುಡಿಗಟ್ಟಿದ್ದು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ್ದಾರೆ.  ಗಂಬೀರ ಗಾಯಗೊಂಡ ಬಾಲಕನನ್ನು ಗುರುಪುರ ವ್ಯವಸಾಯ ಸೇವಾ ಬ್ಯಾಂಕ್ ಬಳಿಯ ರಾಜೇಂದ್ರ ಪೂಜಾರಿ ಹಾಗೂ ಜ್ಯೋತಿ ಎಂಬವರ ಮಗ ರೋಹಿತ್(7) ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣವಾದ ಈಚರ್ ಲಾರಿ ಚಾಳಕ ತಪ್ಪಿಸಿಕೊಂಡಿದ್ದಾನೆ. ಮಂಗಳೂರಿನಿಂದ ಮೂಡಬಿದ್ರೆಗೆ ತೆರಳುವ ವಾಹನಗಳು ರಸ್ತೆಯಲ್ಲೇ ಬಾಕಿ ಬಿದ್ದಿದ್ದು ಬಂದ್ ಆವರಿಸಿದೆ.

1

2

3

4

5

6

7

8

9

10
ಘಟನೆಯ ವಿವರ: ಇಂದು ಬೆಳಗ್ಗಿನ ಜಾವ ಶಾಲೆಗೆ ಹೋಗುವ ಧಾವಂತದಲ್ಲಿದ್ದ ಬಾಲಕ ಬೆನ್ನಿಗೆ ಬ್ಯಾಗ್ ಹೇರಿಕೊಂಡು ಗುರುಪುರದ ರಸ್ತೆಯ ಬದಿಯಲ್ಲಿ ತನ್ನ ಅಮ್ಮನ ಕೈ ಹಿಡಿದು ಹೋಗುತ್ತಿದ್ದ ವೇಳೆ ಬಾಲಕ ಸ್ವಲ್ಪ ಮುಂದಕ್ಕೆ ಹೋಗಲಾರಂಭಿಸಿದ. ಈ ವೇಳೆ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಬಂದ ಈಚರ್ ಲಾರಿ ರಸ್ತೆಯ ಬದಿಯಲ್ಲಿದ್ದ ಬಾಲಕನಿಗೆ ಈಚರ್ನ ಮಧ್ಯಭಾಗ ಸಿಕ್ಕಿಕೊಂಡು ಅದರ ಇಂಜಿನ್ ಸಿಕ್ಕಿಕೊಂಡ ಪರಿಣಾಮ ಬಾಲಕನ ತಲೆಗೆ ಗಂಭೀರ ಏಟು ಬಿದ್ದಿದೆ ಎನ್ನಲಾಗಿದೆ. ತಕ್ಷಣ ಗುರುಪುರದ ರಫೀಕ್ ಎಂಬವರು ತನ್ನ ಜೀಪ್ನಲ್ಲಿ ಗಾಯಾಳು ಬಾಲಕನನ್ನು ಹಿಡಿದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಐಸಿಯು ವಿನಲ್ಲಿ  ಗಂಭೀರಾವಸ್ಥೆಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯಿಂದ ಆಕ್ರೋಶಿತ ಜನರು ಈಚರ್ ಲಾರಿಯ ಗ್ಲಾಸನ್ನು ಪುಡಿಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೊಲೀಸರು ವಿಳಂಬವಾಗಿ ಆಗಮಿಸಿದ್ದಾರೆಂಬ ಕಾರಣಕ್ಕೂ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗ್ರಾಮಸ್ಥರು ಸೇರಿಕೊಂಡು ರಸ್ತೆಯನ್ನು ಬಂದ್ ಮಾಡಿದ್ದೇ ಅಲ್ಲದೆ ವಾಹನಗಳು ಸಂಚರಿಸದಂತೆ ಮಾಡಿದ್ದಾರೆ.
ಇದೇ ವರ್ಷ ಗುರುಪುರದಲ್ಲಿ ನಾಲ್ಕು ಭೀಕರ ಅಪಘಾತ ಸಂಭವಿಸಿದ್ದು ಸುಮಾರು ಆರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಮುಂಚೆಯಷ್ಟೇ ಟಿಪ್ಪರ್ ಲಾರಿಯೊಂದು ಬೈಕ್ಗೆ ಗುದ್ದಿದ ಪರಿಣಾಮ ಬೈಕ್ನಲ್ಲಿದ್ದ ಬಾಲಕ ಹಾಗೂ ಮಹಿಳೆ ಸೇರಿ ಮೂರು ಮಂದಿ ಮೃತರಾಗಿದ್ದರು. ಇದಕ್ಕಿಂತ ಮುಂಚೆ ರೌದ್ರಾವತಾರ ತಾಳಿದ ಬುಲೆಟ್ ಟ್ಯಾಂಕರ್ ರಸ್ತೆ ಬದಿಯ ಕಟ್ಟಡಕ್ಕೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದೀಗ ಬಂದ ಸುದ್ದಿಯಂತೆ ಗುರುಪರದಲ್ಲಿ ಆಕ್ರೋಶಿತ ಜನರು ಟೈರ್ಗೆ ಬೆಂಕಿ ಕೊಟ್ಟು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ ಎನ್ನಲಾಗಿದೆ. ಗುರುಪುರ ಕಡಿದಾದ ರಸ್ತೆಯಾಗಿದ್ದು ಸರಕಾರ ಇದನ್ನು ಅಗಲಗೊಳಿಸಲು ಮನಸ್ಸು ಮಾಡದೇ ಇರುವುದು ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಾಹನಗಳು ರಸ್ತೆ ಮಧ್ಯೆಯೇ ಸಿಕ್ಕಿಹಾಕಿಕೊಂಡಿರುವುದರಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಹಿಂದೂ ಸಂಘಟನೆಯ ಜಗದೀಶ್ ಶೇಣವ, ಉಮಾನಾಥ ಕೋಟ್ಯಾನ್ ಮುಂತಾದವರು ಆಗಮಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ ನೀಡುವಂತೆ ಪಟ್ಟು:  ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕ ಮೊಯ್ದೀನ್ ಬಾವ ಆಗಮಿಸಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದು ಇಲ್ಲದಿದ್ದರೆ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಮಧ್ಯಾಹ್ಮ 11.30 ಆದರೂ ಘಟನಾ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯೂ ಬಾರದ ಹಿನ್ನೆಲೆಯಲ್ಲಿ ನೆರೆದಿದ್ದವರ ತಾಳ್ಮೆಯ ಕಟ್ಟೆ ಒಡೆದುಹೋಗಿದ್ದು ರಸ್ತೆ ಅಗೆತಕ್ಕೆ ಮುಂದಾಗಿದ್ದರು. ಆದರೆ ಪೊಲೀಸರು ಮನವೊಲಿಸಿ ಪ್ರತಿಭಟನಾಕಾರರನ್ನು ಸಮಧಾನ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *