ಬಂಟ್ವಾಳ : ವಿದ್ಯುತ್ ಪ್ರಸರಣಾ ನಿಗಮದ ಬಂಟ್ವಾಳ ಉಪವಿಭಾಗದ ವಗ್ಗ ಶಾಖೆಯಲ್ಲಿ ಮೇಸ್ತ್ರಿಗಳಾಗಿ ಕಾರ್ಯನಿರ್ವಹಿಸಿ ಸರಕಾರಿ ನಿಯಮಾವಳಿಯಂತೆ ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಮಂಜಪ್ಪ ಇವರ ಸನ್ಮಾನ ಹಾಗೂ ವಿದಾಯ ಸಮಾರಂಭ ಬಿ.ಸಿ.ರೋಡ್ ಚಿಕೋರಿ ಹೋಟೇಲ್ ಸಭಾಂಗಣದಲ್ಲಿ ವಗ್ಗ ಶಾಖಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರ ವೃಂದದ ಆಶ್ರಯದಲ್ಲಿ ಜರಗಿತು. ಮೆಸ್ಕಾಂ ಬಂ.ಉಪವಿಭಾಗದ ಅಭಿಯಂತರರಾದ ಕೆ.ವಿ.ಉಮೇಶ್ಚಂದ್ರ ಮಂಜಪ್ಪ ಮತ್ತು ಸಹಧರ್ಮಿಣಿ ರುಕ್ಮಿಣಿಯವರನ್ನು ಸನ್ಮಾನಿಸಿ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಕಳೆದ 37 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸಿದ ಮಂಜಪ್ಪ ರವರ ಕಾರ್ಯತತ್ಪರತೆಯನ್ನು ಶ್ಲಾಘಿಸುವುದರ ಜೊತೆಗೆ ನಿಗಮದ ನೌಕರ ವರ್ಗದ ಎಲ್ಲಾ ಬಂಧುಗಳು ವ್ಯವಸ್ಥೆಯ ಪ್ರಗತಿಗೆ ಸಂಪೂರ್ಣ ಸಹಕಾರವನ್ನು ನೀಡುವಂತೆ ಕೋರಿದರು.

KAR_7188

KAR_7192
ಲೆಕ್ಕಾಧಿಕಾರಿ ಮಂಜ ನಾಯ್ಕ್ ರವರು ನಿವೃತ್ತರಿಗೆ ದೊರಕಬೇಕಾದ ಆರ್ಥಿಕ ಸೌಲಭ್ಯದ ಚೆಕ್ಕನ್ನು ಹಸ್ತಾಂತರಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಹರೀಶ್ ಕುಮಾರ್ ನಾರಾಯಣ ಭಟ್, ಮೆಸ್ಕಾಂ ನೌಕರ ಸಂಘದ ಕೇಂದ್ರ ಸಮಿತಿ ಸದಸ್ಯ ಶಂಕರ್ ಪ್ರಕಾಶ್ , ಮೆಸ್ಕಾಂ ನೌಕರ ಸಂಘದ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ದಾಸ್, ಕಾರ್ಯದರ್ಶಿ ಸಿದ್ದರಾಜು , ವಿದ್ಯುತ್ಛಕ್ತಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಣ್ಣ ಬಂಗೇರಾ, ಬಡ್ಡಕಟ್ಟೆ ಜಗತ್ ಇಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ಜಗ ದೀಶ್ ಪೂಜಾರಿ, ಮೆಲ್ವಿನ್ ಪಿರೇರಾ, ಡಾ.ವಿನಯ್ ಕುಮಾರ್ ಎಸ್.ಎಂ. ಮತ್ತು ಬೆಳ್ತಂಗಡಿ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
ಮಂಜಪ್ಪರವರನ್ನು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರ ವೃಂದ , ಜಗತ್ ಇಲೆಕ್ಟ್ರಿಕಲ್ ಬಡ್ಡಕಟ್ಟೆ , ಗುತ್ತಿಗೆದಾರರ ಸಂಘ, ಮತ್ತು ಶ್ರೀಯುತರ ಅಭಿಮಾನಿ ಗಳು ವೇದಿಕೆಯಲ್ಲ ನೆನಪಿನ ಕಾಣಿಕೆಗಳನ್ನಿತ್ತು ಗೌರವಿಸಿದರು. ವಗ್ಗ ಶಾಖಾಧಿಕಾರಿ ರಂಗಸ್ವಾಮಿಯವರು ಮಂಜಪ್ಪರವರ ನಿವೃತ್ತಿ ನಮ್ಮ ಶಾಖೆಗೆ ತುಂಬಲಾರದ ನಷ್ಟ , ಮಿತ ಮಾತುಗಾರ ಹಿತವಾದ ಕೆಲಸಗಾರ ಶ್ರೀ ಮಂಜಪ್ಪ ಎಂಬ ಮೆಚ್ಚುಗೆ ವ್ಯಕ್ತಪಡಿಸಿ ಅವರಂತ ಕಾರ್ಯದಕ್ಷತೆಯನ್ನು ಯುವ ಪೀಳಿಗೆ ಗಳಿಸಿಕೊಳ್ಳುವಂತೆ ಸೂಚಿಸಿ , ಸ್ವಾಗತಿಸಿ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *