ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಶ್ರೀ ವೈದ್ಯನಾಥ ಪಂಚದೈವಗಳ ಪುನರ್ ನಿರ್ಮಾಣಗೊಂಡ ತೀರ್ಥ ಪುಷ್ಕರಣೆಯ ಸಮರ್ಪಣೇಯು ಜೂ.2ರಂದು ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ದೇವತಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಗ್ಗೆ 10ಕ್ಕೆ ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್.ನಿತ್ಯಾನಂದರಿಂದ ರಚಿಸಲ್ಪಟ್ಟ ಗುತ್ತಿನ ಮನೆಗಳ ಗಡಿಕಾರರ ಧರ್ಮಾಡಳಿತ ಇತಿಹಾಸದ ಸತ್ಯ ವೃತ್ತಾಂತಗಳನ್ನೊಳಗೊಂಡ ಗುತ್ತಿನ ಗಾಥೆ ಧ್ವನಿ ಸುರುಳಿಯ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಧ್ವನಿ ಸುರುಳಿ ಬಿಡುಗಡೆಯನ್ನು ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದರು ಮಾಡಲಿರುವರು. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ದಿಕ್ಸೂಚಿ ಭಾಷಣ ಮಾಡಲಿರುವರು.
ತಿಮರೋಡಿ ಬೀಡು ಉಜಿರೆಯ ಮಹೇಶ ಶೆಟ್ಟಿ ತಿಮರೋಡಿ, ಏತಮೊಗರು ಗುತ್ತು ಬೈಲು ಮಾಗಣೆ ಗಡಿಕಾರ ಜಯ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ, ದೋಣಿಂಜೆಗುತ್ತು ಗಡಿಕಾರ ಗುರುಪುರ ಪ್ರಮೋದ ಕುಮಾರ ರೈ, ಬೀರಣ್ಣ ಶೆಟ್ಟಿ ಮನೆ ಮುಕ್ಕ ಗಡಿಕಾರರು ಬೀರಣ್ಣ ಶೆಟ್ಟಿ ಯಾನೆ ಕೇಶವ ಶೆಟ್ಟಿ, ಇರುವೈಲು ದೊಡ್ಡ ಗುತ್ತು ಗಡಿಕಾರರು ಇಂರ್ದಾಳ ಕೊರಗ ಶೆಟ್ಟಿ ಯಾನೆ ಜಗದೀಶ ಶೆಟ್ಟಿ, ಶ್ರೀ ಬಲವಾಂಡಿ ಕ್ಷೇತ್ರ ಪೆರಾರ ಬಾಲಕೃಷ್ಣ ಶೆಟ್ಟಿ ಆಳಕೆಗುತ್ತು ಉಪಸ್ಥಿತರಿರುವರು. ಎಂದು ಗೋಳಿದಡಿ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ ಶೆಟ್ಟಿ ಗುರುಪುರ ತಿಳಿಸಿದ್ದಾರೆ.

