ಸುದ್ದಿ9:ಬಂಟ್ವಾಳ : ಕಂದಾಯ ಇಲಾಖೆ ವತಿಯಿಂದ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದ ಬಗ್ಗೆ ಪರಿಹಾರದ ಚೆಕ್ ವಿತರಣೆ , ರಾಷ್ಟ್ರೀಯ ಕುಟುಂಬ ಸಹಾಯಧನ ಚೆಕ್ ವಿತರಣೆ ಹಾಗೂ ವಿವಿಧ ಪಿಂಚಣಿಗಳ ಮಂಜೂರಾತಿ ಆದೇಶದ ವಿತರಣಾ ಕಾರ್ಯಕ್ರಮವನ್ನು ಹೋಟೇಲ್ ರಂಗೋಲಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು . ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ , ತಹಶೀಲ್ದಾರ್ ಮಲ್ಲೇಸ್ವಾಮಿ , ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ , ಎ0.ಎಸ್. ಮಹಮ್ಮದ್ , ಚಂದ್ರಪ್ರಕಾಶ್ ಶೆಟ್ಟಿ , ಪುರಸಭಾ ಸದಸ್ಯೆ ವಸಂತಿ ಚಂದಪ್ಪ , ಮಾಜಿ.ಜಿ.ಪಂ.ಸದಸ್ಯ ಎ.ಸಿ.ಭಂಡಾರಿ , ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ , ತಾ.ಪಂ.ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್ , ತಾ.ಪಂ.ಉಪಾಧ್ಯಕ್ಷ ಆನಂದ ಶಂಭೂರು , ತಾ.ಪಂ.ಸದಸ್ಯರಾದ ಐಡಾ ಸುರೇಶ್ , ಮಾಧವ ಮಾವೆ , ಎಫ್ರೆಂ ಸಿಕ್ವೇರಾ , ರಮೇಶ್ ಕುಡುಮೇರ್ , ಗಣ್ಯರಾದ ಬಿ.ಎಚ್.ಖಾದರ್ , ಅಬ್ಬಾಸ್ ಆಲಿ . ಮಾಯಿಲಪ್ಪ ಸಾಲಿಯಾನ್ , ಬಿ.ಕೆ.ಇದಿನಬ್ಬ ಉಪಸ್ಥಿತರಿದ್ದರು .



