ಕೈಕಂಬ:ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ಸತತವಾಗಿ ಸಂಚರಿಸುತ್ತಿರುವ ಮರಳು ಸಾಗಾಟದ ಘನವಾಹನಗಳ ಸಂಚಾರದಿಂದಾಗಿ ನೂಯಿಯಿಂದ ತಾರಿಕರಿಯ ಶಾಲೆಗೆ ಹೋಗುವ ರಸ್ತೆ ತೀರಹದಗೆಟ್ಟು ಜನ ಸಂಚಾರಕ್ಕೆ ಅಯೋಗ್ಯವೆನಿಸುವ ದುಸ್ಥಿತಿಗೆ ಬಂದಿದ್ದು ರಸ್ತಿಯ ಸುರಕ್ಷತೆಯನ್ನು ಕಾಪಾಡುವ ಹಿತ ದೃಷ್ಟಿಯಿಂದ ಮರಳು ಸಾಗಾಟದ ವಾಹನಗಳ ಸಂಚಾರವನ್ನು ನಿರ್ಭಂಧಿಸಿ ಹಾಳಾಗಿರುವ ರಸ್ತೆಯನ್ನು ತಕ್ಷಣ ದುರಸ್ಥಿಗೊಳಿಸಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಯೋಗ್ಯವಾಗುವ ರೀತಿಯಲ್ಲಿ ಮಾರ್ಪಡಿಸಬೇಕೆಂದು ನೂಯಿ, ಬೆಳ್ಳೂರು, ತಾರಿಕರಿಯ,ಕಾಂಜಿಲಕೋಡಿ , ಸುಳ್ಯ ಈ ಭಾಗದ ಜನರು ಶುಕ್ರವಾರ ನೂಯಿಯಲ್ಲಿ ಪ್ರತಿಭಟನೆ ನಡೆಸಿದರು.


ಗ್ರಾಮಸ್ಥರಿಗೆ ಧಮ್ಕಿ:
ದೂರದ ಸುಳ್ಯಕಡೆಯಿಂದ ಬಂದು ಇಲ್ಲಿನ ಪಲ್ಘುಣಿ ನದಿಯಿಂದ ಶತತವಾಗಿ ಮರಳುಗಾರಿಕೆಯನ್ನು ನಡೆಸುತ್ತಿರುವುದಲ್ಲದೇ ಸ್ಥಳೀಯ ರಸ್ತೆಗಳು ಹಾಳಾಗಿರುವ ಬಗ್ಗೆ ಸ್ಥಳೀಯರು ಆಕ್ಷೇಪಿಸಿದಾಗ ನಮಗೆ ಗಣಿಇಲಾಖೆಯ ಅನುಮತಿ ಇದ್ದು ಜಿಲ್ಲಾಧಿಕಾರಿಯವರ ಒಪ್ಪಿಗೆಯು ಇದೆ ಹಾಗಾಗಿ ಮರಳು ಸಾಗಾಟಕ್ಕೆ ಯಾರು ತಡೆಒಡ್ಡುವಂತಿಲ್ಲ ಎಂದು ಗ್ರಾಮಸ್ತರನ್ನು ಗದರಿಸಿ ಬೆದರಿಕೆ ನೀಡಿದ್ದು ರಸ್ತೆ ಬಳಕೆಯ ಬಗ್ಗೆ ಗ್ರಾಮಪಂಚಾಯತಿಯಿಂದ ಯಾವುದೇ ಅನುಮತಿ ಪಡೆಯದ ಕಾರಣ ವಿಚಾರಿಸಲು ಆಗಮಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಧಮ್ಕಿ ನೀಡಿ ನಮಗೆ ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಒಪ್ಪಿಗೆ ಇರುವುದರಿಂದ ಪಂಚಾಯತಿ ಒಪ್ಪಿಗೆ ಅನಾಗತ್ಯ ಎಂದು ಅಸಭ್ಯವಾಗಿ ವರ್ತಿಸಿ ಪಂಚಾಯತ್ ಅಧಿಕಾರಿಯನ್ನು ಬ್ಲಾಕ್ ಮೇಲ್ ನಡೆಸಿರುವುದು ಸ್ಥಳೀಯರನ್ನು ಕೆರಳಿಸಿದೆ.
ಈಸಮಸ್ಯೆಯ ಬಗ್ಗೆ ಬಜ್ಪೆ ಪೋಲಿಸ್ ಠಾಣಾ ಹಾಗೂ ಸಂಬಂಧ0ಪಟ್ಟ ಎಲ್ಲಾ ಅಧಿಕಾರಿಗಳಿಗೆ ರಸ್ತೆ ದುರವಸ್ತೆಯ ಬಗ್ಗೆ ಲಿಖಿತ ದೂರು ನೀಡಿದ್ದು ಮರಳು ಗಾರಿಕೆಯ ವಾಹನಗಳ ಸಂಚಾರವನ್ನು ತಕ್ಷಣದಿಂದ ನಿಷೇಧಿಸಬೇಕೆಂದು ಅಗ್ರಹಿಸಿದ್ದಾರೆ.
ಈ ಪರಿಸರದಲ್ಲಿ ತಾರಿಕರಿಯ ದ.ಕ ಹಿ.ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ,ಮಸೀದಿ ಮತ್ತು ಮದರಸ, ದೈವಸ್ಥಾನಗಳಿದ್ದು ಶಾಲಾಮಕ್ಕಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಈ ಇಕ್ಕಾಟಾದ ರಸ್ತೆಯಲ್ಲಿ ಮರಳು ಸಾಗಾಟದ ಲಾರಿಗಳ ಸಂಚಾರದಿಂದ ತೀವ್ರತೊಂದರೆಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ತುರ್ತು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ತರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳಾ ಸಂಘಟನೆಗಳು ಸಂಘಸಂಸ್ಥೆಗಳು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಗ್ರಾ.ಪಂ.ಸದಸ್ಯರಾದ ಯಶವಂತ ಶೆಟ್ಟಿ, ಮಾಜಿ ಗ್ರಾ,ಪಂ ಸದಸ್ಯರಾದ ಜಗದೀಶ್,ಹರೀಶ್ಚಂದ್ರ. ಮಾಜಿ ಗ್ರಾ.ಪಂ.ಅಧ್ಯಕ್ಷೆ ಪದ್ಮಿನಿ, ಕೃಷಿಕರಾದ ಸುಬ್ಬಯ್ಯ ಭಂಡಾರಿ, ರಮಾನಾಥ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಯೋಗಿಶ್, ಮಯ್ಯದಿ, ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.



