ಬಂಟ್ವಾಳ : ತಾಲ್ಲೂಕಿನ ವಗ್ಗ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡು 27 ವರ್ಷಗಳ ಬಳಿಕ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇದೇ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಾಗಿದೆ.
ಇಲ್ಲಿನ ಒಟ್ಟು 43 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 3 ಮಂದಿಗೆ ವಿಶಿಷ್ಟ ಶ್ರೇಣಿ, 30 ಮಂದಿಗೆ ಪ್ರಥಮ ಶ್ರೇಣಿ, 6 ಮಂದಿಗೆ ದ್ವಿತೀಯ ಶ್ರೇಣಿ, ನಾಲ್ಕು ಮಂದಿಗೆ ತೃತೀಯ ಶ್ರೇಣಿ ದೊರೆತಿದೆ.
ವಿದ್ಯಾರ್ಥಿನಿ ಸಲ್ಮತ್ ಬಾನು 586 (93.76%) ಅಂಕ ಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. ಈಕೆ ವಗ್ಗ ನಿವಾಸಿ ಅಬ್ದುಲ್ ಕರೀಂ ಮತ್ತು ಸುಮಯ್ಯಾ ಬಾನು ದಂಪತಿ ಪುತ್ರಿ. ವಿದ್ಯಾರ್ಥಿನಿಯರಾದ ಫಾತಿಮಾ ಶಕೀಲಾ 580 (92.8%) ಅಂಕ ಗಳಿಸಿ ಶಾಲೆಯಲ್ಲಿ ದ್ವಿತೀಯ ಸ್ಥಾನ ಮತ್ತು ಮಮತಾ 563 (90%) ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *