ಮಂಗಳೂರು: ವಾಹನ ಅಪಘಾತದಲ್ಲಿ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ ಮುಂಢೆಯವರಿಗೆ ದ.ಕ ಜಿಲ್ಲಾ ಬಿಜೆಪಿ ಸಮಿತಿ ತುತರ್ು ಸಭೆ ಸೇರಿ ಶ್ರದ್ಧಾಂಜಲಿ ಅಪರ್ಿಸಿತು. ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗೋಪಿನಾಥ ಮುಂಢೆೆಯವರ ಅಕಾಲಿಕ ನಿಧನ ಪಕ್ಷಕ್ಕೆ ಮತ್ತು ದೇಶಕ್ಕೆ ತುಂಬಲಾರದ ನಷ್ಟ. ಮುಂಢೆೆಯವರು ಹಿಂದುಳಿದ ವರ್ಗಗಳ ಜನತೆಯ ಧ್ವನಿಯಾಗಿ ಎಲ್ಲಾ ಪಕ್ಷಗಳ ನಾಯಕರುಗಳೊಂದಿಗೆ ಆತ್ಮೀಯತೆ ಹೊಂದಿದ್ದರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಮಹಾರಾಷ್ಟ್ರದ ಪ್ರಗತಿಯಲ್ಲಿ ಅವಿಸ್ಮರಣೀಯ ಪಾತ್ರ ವಹಿಸಿದ್ದ ಮುಂಢೆೆಯವರು ಪಕ್ಷದ ಸಂಘಟನೆಯಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. ಕನರ್ಾಟಕದಲ್ಲಿ ಪಕ್ಷದ ಉಸ್ತುವಾರಿಯಾಗಿಯೂ, ಸಂಘಟನೆಯ ಬೆಳವಣಿಗೆಯಲ್ಲಿ ಕೆಲಸ ಮಾಡಿದ್ದರು. ನೇರ ನಡೆನುಡಿಯ, ಪ್ರಾಮಾಣಿಕ, ಸಜ್ಜನ, ಸರಳ ಮತ್ತು ಸ್ನೇಹ ಜೀವಿಯಾಗಿದ್ದ ಮುಂಢೆೆಯವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ಉಮಾನಾಥ ಕೋಟ್ಯಾನ್ ಸಂತಾಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕಿಶೋರ್ ರೈ, ನಗರ ಅಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ವಕ್ತಾರ ಸತೀಶ್ ಪ್ರಭು, ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಪುಷ್ಪಲತಾ ಗಟ್ಟಿ, ಸಂಜಯ ಪ್ರಭು, ಅಶೋಕ್ ಕೃಷ್ಣಾಪುರ, ಬಾಬು ಬಂಗೇರ ಪ್ರಮುಖರಾದ ಎಂ. ಶಂಕರ ಭಟ್, ಸುಧಾಕರ್ ಜೋಷಿ, ರಾಜಗೋಪಾಲ್ ರೈ, ಸುಧೀರ್ ಶೆಟ್ಟಿ, ವೇದವ್ಯಾಸ ಕಾಮತ್, ರೂಪಾ. ಡಿ. ಬಂಗೇರ, ಪ್ರೇಮಾನಂದ ಶೆಟ್ಟಿ, ಮೀರಾ ಕಕರ್ೆರ, ಯಶವಂತ ಅಮೀನ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಗುರುಚರಣ್ ಮುಂತಾದವರು ಉಪಸ್ಥಿತರಿದ್ದರು.
