ಬಂಟ್ವಾಳ : ಕಳ್ಳಿಗೆ ಗ್ರಾಮ ಪಂ.ವ್ಯಾಪ್ತಿಯ ಬ್ರಹ್ಮರಕೂಟ್ಲು ಪ್ರದೇಶದಲ್ಲಿ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದು ಸ್ಥಳೀಯ ಗ್ರಾಮ ಪಂ. ಮತ್ತು ಜಿಲ್ಲಾ ಪಂ.ಸಹಕಾರದಿಂದ ತೆರದ ಬಾವಿಗೆ ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಜೋಡಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಸಜಿಪ ಮುನ್ನೂರು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತು ಗ್ರಾಮ ಪಂ.ಅಧ್ಯಕ್ಷೆ ರತ್ನಾ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷ ಪುರುಷ ಸಾಲಿಯಾನ್, ಪಂ.ಸದಸ್ಯರಾದ ಮಧುಸೂದನ್ ಶೆಣೈ, ವಿಜಯ್ ಡಿಸೋಜ, ಮಹೇಶ್ ಚಂದ್ರಿಗೆ, ರಮೇಶ್ ಪಚ್ಚಿನಡ್ಕ, ವಿಮಲ, ಯಶೋಧ, ಸರಸ್ವತಿ, ಭಾಗೀರತಿ , ರೇವತಿ, ಜಿ.ಪಂ.ನ ಕಿರಿಯ ಅಧಿಕಾರಿ ಕೃಷ್ಣ, ಪಂ.ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚೌಹಾಣ್, ಸ್ಥಳೀಯ ಮುಖಂಡರಾದ ದಿವಾಕರ ಪಂಬದಬೆಟ್ಟು, ಶಶಿಧರ, ಪದ್ಮನಾಭ ರಾವ್, ಹಸನಬ್ಬ , ಮಾಧವ ವಳವೂರು, ಮನೋಜ್ ,ಮಾಧವ ಬ್ರಹ್ಮರಕೂಟ್ಲು, ದಿನೇಶ್ ರೈ, ರಾಜೇಶ್ ಶೆಟ್ಟಿ, ಪ್ರವೀಣ್ ಸತೀಶ, ಚೆನ್ನಪ್ಪ ಗುಂಡಿ ಉಪಸ್ಥಿತರಿದ್ದರು.



