ಕಲ್ಲಡ್ಕ,ಮೇ 5:ಕನರ್ಾಟಕ ರಾಜ್ಯ ಸರಕಾರದ ಎತ್ತಿನ ಹೊಳೆ ಯೋಜನೆಯನ್ನು ವಿರೋಸಿ ಪ್ರತಿಭಟನಾ ಹೋರಟವನ್ನು ತ್ರೀವ್ರಗತಿಯಿಂದ ಜಿಲ್ಲೆಯಾದ್ಯಂತ ನಡೆಸುವ ಕುರಿತು ಚರ್ಚಿಸಲು ಬಂಟ್ವಾಳ ತಾಲೂಕಿನ ಪ್ರಮುಖರ ಸಭೆಯೊಂದನ್ನು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಮೇ 7ರಂದು ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಜರಗಲಿದೆ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಮಾರ್ಗದರ್ಶನ ಮಂಡಳಿಯ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ಮೇ 16ರಂದು ದ.ಕ.ಜಿಲ್ಲಾಕಾರಿ ಕಛೇರಿಯ ಮುಂದೆ ಬೃಹತ್ ಪ್ರತಿಭಟನಾ ಕಾರ್ಯಕ್ರಮ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದು ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾರ್ವಜನಿಕರೆಲ್ಲರೂ ಭಾಗವಹಿಸುವಂತೆ ವಿನಂತಿಸಿಕೊಳ್ಳಲು ರಕ್ಷಣಾ ಸಮಿತಿಯ ಕೋರಿದೆ.
ಬಂಟ್ವಾಳ ತಾಲೂಕಿನ ಪರವಾಗಿ ಬಿ.ಸಿ.ರೋಡಿನ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಜೀವಜಲ ನೇತ್ರಾವತಿಯ ಉಳಿವಿನ ರಕ್ಷಣೆಗಾಗಿ ಈ ಸಭೆಗೆ ಬಂಟ್ವಾಳ ತಾಲೂಕಿನ ಎಲ್ಲಾ ಸಮುದಾಯದ ಬಂಧುಗಳು ರೈತರು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳ ಸದಸ್ಯರುಗಳು ಎಲ್ಲಾ ಧರ್ಮದ ಧರ್ಮಗುರುಗಳು ಸಾರ್ವಜನಿಕ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು
