ಮೂಡುಬಿದರೆ: ಹತ್ತು ಅಡಿಯಷ್ಟು ನೀರಿದ್ದ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯನ್ನು ಸಕಾಲದಲ್ಲಿ ಆಗಮಿಸಿದ ಮೂಡುಬಿದಿರೆ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಬೆಳಿಗ್ಗೆ ಬೆಳುವಾಯಿಯ ಕೆರೆಗುಂಡಿಯಲ್ಲಿ ನಡೆದಿದೆ. ಆನಂದ ಅಂಚನ್ ಎಂಬವರ ಪತ್ನಿ ಶೋಭಾ(45) ರಕ್ಷಿಸಲ್ಪಟ್ಟ ಮಹಿಳೆ. ತನ್ನ ಮನೆಯ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ತಕ್ಷಣ ಅಗ್ನಿಶಾಮಕದಳಕ್ಕೆ ಸುದ್ಧಿ ಮುಟ್ಟಿಸಿದರು. ಧಾವಿಸಿ ಬಂದ ಅಗ್ನಿಶಾಮಕದಳದವರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಯೋಗೀಶ್ ಹಾಗೂ ಚಾಲಕ ಚಂದ್ರಶೇಖರ್ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.
