ಬಂಟ್ವಾಳ ; ತಾಲೂಕು ಮೂಡುಪಡುಕೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶನಿವಾರ ಶಾಲಾ ಪ್ರಾರಂಭೋತ್ಸವ ಜರಗಿತು. ಇರ್ವತ್ತೂರುಪದವಿನಂದ ಶಾಲೆಯವರೆಗೆ ಮೆರವಣಿಗೆಯಲ್ಲಿ ವಿದ್ಯಾಥರ್ಿಗಳನ್ನು ಶಾಲೆಗೆ ಕರೆತಂದು ಸ್ವಾಗತಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ, ಬಂಟ್ವಾಳ ಕ್ಷೇತ್ರ ಶಿಕ್ಷಣಾಕಾರಿ ಶೇಷಶಯನ ಕಾರಿಂಜ, ತಾ.ಪಂ.ಸದಸ್ಯ ರಮೇಶ ಕುಡುಮೇರು, ಗ್ರಾ.ಪಂ.ಸದಸ್ಯರಾದ ಎಂ.ರಾಜೀವ ಶೆಟ್ಟಿ ಎಡ್ತೂರು, ಶಂಕರ ಶೆಟ್ಟಿ ಬೆದ್ರಮಾರು, ನಳಿನಿ, ಶಿಕ್ಷಣ ಸಂಯೋಜಕ ರಮಾನಂದ, ಶಿಕ್ಷಣ ಸಮನ್ವಯಾಕಾರಿ ಕಮಲಾಕ್ಷ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.moodupadukody-1a

 ಪುಂಜಾಲಕಟ್ಟೆ ನಿವೃತ್ತ ಶಿಕ್ಷಕ ಶಿವಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.moodupadukody-1

 

ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರವನ್ನು ವಿದ್ಯಾಥರ್ಿಗಳಿಗೆ ವಿತರಿಸಲಾಯಿತು. ನಿವೃತ್ತಿ ಹೊಂದಿದ ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ದ.ಕ.ಜಿಲ್ಲಾ ಫೊಟೋಗ್ರಾಫರ್ ಅಸೋಸಿಯೇಷನ್ ಬಂಟ್ವಾಳ ತಾಲೂಕು ವಲಯ ವತಿಯಿಂದ 1ನೇ ತರಗತಿಗೆ ಸೇರ್ಪಡೆಗೊಂಡ 20 ವಿದ್ಯಾಥರ್ಿಗಳಿಗೆ ಸಿದ್ಧಪಡಿಸಿದ ಸಮವಸ್ತ್ರವನ್ನು ವಿತರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷ ಆನಂದ ನಿರಾರಿ, ಗೌರವಾಧ್ಯಕ್ಷ ದಯಾನಂದ, ಕಾರ್ಯದಶರ್ಿ ರಾಜೇಂದ್ರ , ಸದಸ್ಯರಾದ ಹರೀಶ್ ನಾಟಿ, ಕಿಶೋರ್, ಸುಕುಮಾರ್, ರಾಮ್ ಇರಾ ಭಾಗವಹಿಸಿದ್ದರು.
ಮುಖ್ಯ ಶಿಕ್ಷಕ ಶಿವಪ್ಪ ಪೂಜಾರಿ ಅವರು ಸ್ವಾಗತಿಸಿದರು. ಶಿಕ್ಷಕ ಕುಮಾರ್ ವಂದಿಸಿದರು. ಶಿಕ್ಷಕ ಸುನಿಲ್ ಪ್ರಸ್ತಾವಿಸಿದರು. ಭರತ್ ಕುಮಾರ್ ಜೈನ್ ಮತ್ತು ದೈಹಿಕ ಶಿಕ್ಷಕ ಗೋಪಾಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *