ಪೊಳಲಿ: ಕರಿಯಂಗಳ ಗ್ರಾಮದ ಶ್ರೀ ವ್ಯಾಘ್ರ ಚಾಮುಂಡಿ ಸಪರವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ ಎ.24 ರಂದು ಭಾನುವಾರ ರಾತ್ರಿ 8 ಗಂಟೆಯಿಂದ ಶ್ರೀ ವ್ಯಾಘ್ರ ಚಾಮೂಂಡಿ ಸಪರಿವಾರ ದೈವಗಳ ನೇಮೋತ್ಸವ ಜರಗಲಿದೆ.
ಪಿ ರಾಮಚಂದ್ರ ತುಂಗಾ ಅವರ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ಕರಿಯಂಗಳ ನಾಗಬನದಲ್ಲಿ ನಾಗತಂಬಿಲ ಪೂಜೆ, 9ಗಂಟೆಗೆ ಗಣಹೋಮ, 9.30 ರಿಂದ ಸತ್ಯನಾರಾಯಣ ಪೂಜೆ ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ 12.30ಕ್ಕೆ ಶ್ರೀ ದೈವಗಳಿಗೆ ನವಕ ಕಲಶಾಭಿಷೇಕ ಹಾಗೂ ಪನಿಯಾರ ಸೇವೆ. ಮಧ್ಯಾಹ್ನ ಗಂಟೆ 1ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 8ಕ್ಕೆ ಶೃಈ ಮಹಿಷಾಂದಾಯ ದೈವದ ನೇಮೋತ್ಸವ ರಾತ್ರಿ ಗಂಟೆ 10 ಕ್ಕೆ ಶ್ರೀ ವ್ಯಾಘ್ರ ಚಾಮೂಂಡಿ ದೈವದ ನೇಮೋತ್ಸವ ರಾತ್ರಿ ಗಂಟೆ 3ಕ್ಕೆ ಧೂಮಾವತಿ ಬಂಟ ದೈವದ ನೇಮೋತ್ಸವ ಜರಗಲಿದೆ. ಎಂದು ಕರಿಯಂಗಳ ಶ್ರೀ ವ್ಯಾಘ್ರ ಚಾಮೂಂಡಿ ಜೀರ್ಣೋದ್ದಾರ ಸಮಿತಿಯ ಪ್ರಕಟನೆ ತಿಳಿಸಿದೆ.

