ಕಲ್ಲಡ್ಕ: ಶ್ರೀರಾಮ ಮಂದಿರ ಕಲ್ಲಡ್ಕ ಇದರ ಲೋಕಾರ್ಪಣೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಮಂದಿರದ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಶುಕ್ರವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಶ್ರೀರಾಮ ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ.ಕೃಷ್ಣಪ್ಪ ಹಾಗೂ ಪ್ರಮುಖರಾದ ನಾರಾಯಣ ಸೋಮಯಾಜಿ, ಡಾ|| ಕಮಲಾ ಪ್ರಭಾಕರ ಭಟ್, ನಾಗೇಶ್ ರಾಮನಗರ, ಕಶೆಕೋಡಿ ಸೂರ್ಯ ಭಟ್, ಯತಿನ್ ಕುಮಾರ್ ಏಳ್ತಿಮಾರು, ಸತೀಶ್ ಶಿವಗಿರಿ, ಕೊ.ಶಿವಪ್ಪ, ವಜ್ರನಾಥ ಮಡ್ಲಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಏ.19ರಿಂದ 23ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 19 ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಫಲಾನ್ಯಾಸ ಪ್ರಾರ್ಥನೆ, 10.30ಕ್ಕೆ ಧ್ವಜಾರೋಹಣ, ಉಗ್ರಾಣ ಮುಹೂರ್ತ-ಪೂಜೆ, ವಂದೇ ಮಾತರಂ, ರಾಮನಾಮ ತಾರಕ ಜಪ ನಡೆಯಲಿದೆ. ಸಂಜೆ 7.00ಕ್ಕೆ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಪ್ರಾಸಾದ ಶುದ್ಧಿ, ಬಿಂಬ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಭೂವರಾಹ ಹೋಮ, ಸುದರ್ಶನ ಹೋಮ, ಬಿಂಬ ಜಲಾಧಿವಾಸ ನಡೆಯಲಿದೆ.

ಹೊರೆಕಾಣಿಕೆ ಸಮರ್ಪಣೆ
ಏ.19ರಂದು ಸಂಜೆ 4.00ಕ್ಕೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಹೊರೆಕಾಣಿಕೆಯನ್ನು ಮೆಲ್ಕಾರು ಜಂಕ್ಷನ್ ಬಳಿಯಿಂದ ಭವ್ಯ ಶೋಭಾಯಾತ್ರೆಯೊಂದಿಗೆ ಶ್ರೀರಾಮ ಮಂದಿರಕ್ಕೆ ತರಲಾಗುವುದು.
ರಾಜಗೋಪುರದ ಶಿಖರ ಪ್ರತಿಷ್ಠೆ
ಏ.20ರಂದು ಬೆಳಿಗ್ಗೆ 8.00ಕ್ಕೆ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಧ್ಯಾಹ್ನ ನರಸಿಂಹ ಹೋಮ, ರಾಜಗೋಪುರದ ಶಿಖರ ಪ್ರತಿಷ್ಠೆ, ಸಂಜೆ 6.00ಕ್ಕೆ ಬಿಂಬ ಜಲೋದ್ಧಾರ ಜ್ಞಾನಾಧಿವಾಸ, ಯಂತ್ರ ಪ್ರತಿಷ್ಠಾಪನೆ, ಸಂಜೆ 7.00ಕ್ಕೆ ಬ್ರಹ್ಮ ಕಲಶ ಪೂಜೆ ನಡೆಯುವುದು. ಸಂಜೆ 5.00ರಿಂದ ಸಾಂಸ್ಕøತಿಕ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಏರ್ಪಡಿಸಲಾಗಿದೆ. ರಾತ್ರಿ 9.00ಕ್ಕೆ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ರಾಷ್ಟ್ರದೇವೋಭವ ಕಾರ್ಯಕ್ರಮವಿದೆ.
ಧಾರ್ಮಿಕ ಸಭೆ
ಏ.20 ಸಂಜೆ 7.00ಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಸಂಸ್ಕಾರ ಭಾರತಿ ಪ್ರಾಂತ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಧಾರ್ಮಿಕ ಉಪನ್ಯಾಸ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸಂಸದ ನಳಿನ್ಕುಮಾರ್ ಕಟೀಲು, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಉಡುಪಿ, ಶಾಸಕರಾದ ಸಿ.ಟಿ.ರವಿ ಚಿಕ್ಕಮಗಳೂರು, ಮುಖ್ಯ ಸಚೇತಕ ಸುನಿಲ್ ಕುಮಾರ್, ಉದ್ಯಮಿಗಳಾದ ಗುರ್ಮೆ ಸತೀಶ್ಶೆಟ್ಟಿ ಕಾಪು, ಡಾ|| ಎ.ಜೆ ಶೆಟ್ಟಿ ಮಂಗಳೂರು, ಸುಬ್ರಹ್ಮಣ್ ವಿ. ಬೆಂಗಳೂರು, ಸುನಿಲ್ಕುಮಾರ್ ಜಯರಾಮ ತೇಜು ಮಸಾಲ, ರಘುನಾಥ ಸೋಮಯಾಜಿ ಮಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ.
ಶ್ರೀರಾಮಚಂದ್ರ ದೇವರ ಪ್ರತಿಷ್ಠೆ : ನಿರಂತರ ಸೀಯಾಳಾಭಿಷೇಕ
ಏ.21ರಂದು ಬೆಳಿಗ್ಗೆ 5.30ರಿಂದ ಗಣಹೋಮ, ಪ್ರತಿಷ್ಠಾ ಹೋಮ, ಧಾರ್ಮಿಕ ಹೋಮ, ಧಾರ್ಮಿಕ ವಿಧಿಗಳು, ನಿರಂತರ ರಾಮ ಭಜನೆ, ಬೆಳಿಗ್ಗೆ 8.33 ರಿಂದ ಸಪರಿವಾರ ಶ್ರಿರಾಮಚಂದ್ರ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರತಿಷ್ಠಾ ಪೂಜೆ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಬೆಳಿಗ್ಗೆ 9.30ರಿಂದ ಕೋಟಿ ತುಳಸೀ ಅರ್ಚನೆ, ಶ್ರೀರಾಮ ಜಪ ಸಮರ್ಪಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ. ನಿರಂತರವಾಗಿ ಸೀಯಾಳಾಭಿಷೇಕ ನಡೆಯಲಿದೆ.
ಧರ್ಮ ಸಂಸತ್ತು
ಸಂಜೆ 5.30ರಿಂದ ಶ್ರೀರಾಮ ಪ.ಪೂ ಹಾಗೂ ಪದವಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ 7.00ಕ್ಕೆ ಯತಿಶ್ರೇಷ್ಠರ ಆಗಮನದಿಂದ ಧರ್ಮ ಸಂಸತ್ತು ನಡೆಯಲಿದೆ. ಪ್ರಭಾತ್ ಕಲಾವಿದರು ಬೆಂಗಳೂರು ಇವರಿಂದ ಧರ್ಮಭೂಮಿ ನೃತ್ಯ ರೂಪಕ ನಡೆಯಲಿದೆ.
ಏ.24ರಂದು ಬೆಳಿಗ್ಗೆ ಬಾಲ ಗಣಪತಿ ಹೋಮ, ಹನುಮಾನ್ ಯಾಗ, ಮಧ್ಯಾಹ್ನ ಮಹಾಪೂಜೆ, ಸಂಜೆ ದುರ್ಗಾ ನಮಸ್ಕಾರ ಪೂಜೆ ಬಳಿಕ ಶ್ರೀರಾಮ ಶೀಶುಮಂದಿರ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9.00ರಿಂದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಧಾರ್ಮಿಕ ಸಭೆ
ಸಂಜೆ 7.30ರಿಂದ ಧಾರ್ಮಿಕ ಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದಗೌಡ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ನಾರಾಯಣ ಸ್ವಾಮಿ ಬೆಂಗಳೂರು, ಅಂಗಾರ ಸುಳ್ಯ, ವಿಧಾನ ಪರಿಷತ್ತು ಸದಸ್ಯ ವಿ. ಸೋಮಣ್ಣ, ಉದ್ಯಮಿ ಪ್ರಕಾಶ್ಶೆಟ್ಟಿ ಬೆಂಗಳೂರು ಭಾಗವಹಿಸಲಿದ್ದಾರೆ.
ಏ.23ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಶ್ರೀರಾಮುಲು, ವಿಧಾನ ಪರಿಷತ್ತು ಸದಸ್ಯರಾದ ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಧರ್ಮರಾಜ್ ಮೊದಲಾದವರು ಭಾಗವಹಿಸಲಿದ್ದಾರೆ.
