ಕಲ್ಲಡ್ಕ: ಸುದೃಢವಾದ ಸಮಾಜ ನಿರ್ಮಾಣವಾಗಲು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತ ವ್ಯಕ್ತಿಗಳು ಬೇಕು. ಸಮಾಜದಲ್ಲಿ ಶುದ್ಧ ಆಹಾರ, ಉತ್ತಮ ವೈದ್ಯಕೀಯ ವ್ಯವಸ್ಥೆ ಮತ್ತು ಸಂಸ್ಕಾರಯುತ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ|| ಪ್ರಭಾಕರ ಭಟ್ ಹೇಳಿದರು.
ಅವರು ಕಲ್ಲಡ್ಕದಲ್ಲಿ ಮಂಗಳವಾರ ಶ್ರೀರಾಮ ವಿದ್ಯಾಕೆಂದ್ರ, ಶ್ರೀರಾಮ ಪ್ರಾಥಮಿಕ ಹಾಗೂ ಪ್ರೌಢಶಾಲಾಭಿವೃದ್ಧಿ ಸಮಿತಿ ವತಿಯಿಂದ ಎ.ಜೆ.ವೈದ್ಯಕೀಯ ಆಸ್ಪತ್ರೆ, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
???????????????????????????????ಮಂಗಳೂರು ನಗರ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ|| ಸುಜಯ್ ಭಂಡಾರಿ, ಬಾಳ್ತಿಲ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ವಿಶ್ವೇಶ್ವರ ಭಟ್, ಎ.ಜೆ.ಆಸ್ಪತ್ರೆಯ ಡಾ|| ಕರಣ್, ಡಾ|| ಪ್ರೇರಣಾ, ಹಿರಿಯ ಶಿಕ್ಷಕ ಜಯಾನಂದ ಪೆರಾಜೆ ಹಾಗೂ ಇತರ 30 ಮಂದಿ ವೈದ್ಯರ ತಂಡ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಭಟ್ ಶಿವಗಿರಿ ಸ್ವಾಗತಿಸಿದರು. ಗೋಪಾಲ ಅಮ್ಟೂರು ವಂದಿಸಿದರು.
ಶಿಬಿರದಲ್ಲಿ ದಂತ ಹಾಗೂ ಕಣ್ಣಿನಚಿಕಿತ್ಸೆ, ಚರ್ಮರೋಗ ಹಾಗೂ ಮಕ್ಕಳ ಆರೋಗ್ಯದ ಪರೀಕ್ಷೆಯಲ್ಲಿ 300ಕ್ಕೂ ಹೆಚ್ಚಿನ ಮಂದಿ ಪ್ರಯೋಜನ ಪಡೆದುಗೊಂಡರು. ಸ್ಥಳೀಯ ಸಂಘ ಸಂಸ್ಥೆಗಳಾದ ಶ್ರೀರಾಮ ಭಜನಾ ಮಂದಿರ, ಶ್ರೀಗುರೂಜಿ ಸೇವಾ ಸಂಘ, ಗೆಳೆಯರ ಬಳಗ ಕಾಂಪ್ರಬೈಲು, ವಿಶ್ವ ಹಿಂದು ಪರಿಷತ್ ಬಜರಂಗದಳಕಲ್ಲಡ್ಕ ವಲಯ, ಚೈತನ್ಯ ಹಿರಿಯ ವಿದ್ಯಾರ್ಥಿ ಸಂಘ, ಉಮಾಶಿವ ಕ್ಷೇತ್ರಗೇರುಕಟ್ಟೆ, ಗಣೇಶ್ ಮಂದಿರ ಗೋಳ್ತಮಜಲು, ಮಣಿಕಂಠಯುವ ಶಕ್ತಿ ಕುದ್ರೆಬೆಟ್ಟು, ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ, ಸರ್ವಶ್ರೇಷ್ಠ ಫ್ರೆಂಡ್ಸ್, ನೇತಾಜೀಯುವಕ ಮಂಡಲ ಕಲ್ಲಡ್ಕ ಸಹಕಾರ ನೀಡಿದ್ದರು.

By suddi9

Leave a Reply

Your email address will not be published. Required fields are marked *