ಬಂಟ್ವಾಳ: ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಶೋಷಿತರು ಮತ್ತು ಮಹಿಳೆಯರು ಶಿಕ್ಷಣದ ಜೊತೆಗೆ ಶಿಸ್ತುಬದ್ಧ ಜೀವನ ನಡೆಸುವ ಮೂಲಕ ಡಾ.ಅಂಬೇಡ್ಕರ್ ಅವರು ಆದರ್ಶದೊಂದಿಗೆ ಮುನ್ನಡೆದಾಗ ಮಾತ್ರ ಸಮಾಜದಲ್ಲಿ ಬೆಳವಣಿಗೆ ಸಾಧಿಸಲು ಅನುಕೂಲವಾಗುತ್ತದೆ ಎಂದು ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಹೇಳಿದರು.
ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಸಮನ್ವಯ ಸಮಿತಿ ವತಿಯಿಂದ ಈಚೆಗೆ ನಡೆದ ಜಿಲ್ಲಾ ಪದಾಧಿಕಾರಿಗಳ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಸಂಘದ ಗೌರವಾಧ್ಯಕ್ಷರಾಗಿ ಸಜಿಪನಡು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಈರಪ್ಪ ಡಿ., ಜಿಲ್ಲಾಧ್ಯಕ್ಷರಾಗಿ ಆಂಜನಯ ಸ್ವಾಮಿ ಹೊಸಮನಿ, ಉಪಾಧ್ಯಕ್ಷರಾಗಿ ಉಪನ್ಯಾಸಕ ಶೀನಪ್ಪ ಎನ್., ಕಾರ್ಯದರ್ಶಿಯಾಗಿ ಕುಮಾರ್ ಡಿ. ಸಿದ್ಧಕಟ್ಟೆ, ಬೆಳ್ತಂಗಡಿ ತಾಲ್ಲೂಕು ಘಟಕ ಅಧ್ಯಕ್ಷರಾಗಿ ಗುರುಮೂರ್ತಿ, ಕಾರ್ಯದರ್ಶಿಯಾಗಿ ಮಹಾಲಿಂಗ ಕೆ., ಪುತ್ತೂರು ತಾಲ್ಲೂಕು ಘಟಕ ಅಧ್ಯಕ್ಷರಾಗಿ ಉಪನ್ಯಾಸಕ ರಮೇಶ್, ಕಾರ್ಯದರ್ಶಿಯಾಗಿ ಆನಂದ ಅಜಿಲ, ಮಂಗಳೂರು ತಾಲ್ಲೂಕು ಘಟಕ ಅಧ್ಯಕ್ಷರಾಗಿ ಪ್ರಕಾಶ್, ಕಾರ್ಯದರ್ಶಿಯಾಗಿ ಅಧೀಕ್ಷಕ ರಮೇಶ್ ಇವರು ಆಯ್ಕೆಗೊಂಡರು.
7btl-Ambedkarಕುರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಸವರಾಜ್ ಪಲ್ಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಮೋಹನ್, ವಿಶ್ವವಿದ್ಯಾನಿಲಯ ತಾಂತ್ರಿಕ ಅಧಿಕಾರಿ ಜನಾರ್ದನ ಕೆ., ಸಂಘದ ಖಜಾಂಚಿ ಪುಷ್ಪ ಮತ್ತಿತರರು ಶುಭ ಹಾರೈಸಿದರು. ಸಂಘದ ಪದಾಧಿಕಾರಿ ಕುಮಾರ್ ಡಿ., ದೊಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *