ಕೈಕಂಬ: ಇತ್ತೀಚೆಗೆ ಮೆಸ್ಕಾಂ ಕೈಕಂಬ ಶಾಕೆಯಲ್ಲಿ ಸುದೀರ್ಘ ಅವಧಿಯಲ್ಲಿ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿದ ಜದದೀಶ್ ಮೂರ್ತಿ ಇವರನ್ನು ಮೆಸ್ಕಾಂ ಕೈಕಂಬ ಉಪವಿಭಾಗದ ವತಿಯಿಂದ ಮಾ.31ರಂದು ಗುರುವಾರ ಕೈಕಂಬದ ಮೇಘ ಪ್ಲಾಜಾ ಸಭಾಭವದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಕಾವೂರು ನಂ-2 ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಆದ ಲೂರ್ಡು ಸ್ವಾಮಿ ವಹಿಸಿದ್ದರು. ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಉಪಾಧ್ಯಕ್ಷರಾದ ಉಮೇಶ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಿರಿಯಪ್ಪ, ಪದಾಧಿಕಾರಿಗಳಾದ ಗುರುಮೂರ್ತಿ, ಜಯಶೆಟ್ಟಿ, ಶಾಂತಾನಂದ ಶೆಟ್ಟಿ, ರಾಜೇಶ್, ಬೋಜ, ಸುಜಿತ್, ಷಣ್ಮುಖಪ್ಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೈಕಂಬ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಾದ ತಿಮ್ಮಪ್ಪ ಗೌಡ, ಗೀತಾ ಪೈ, ಶ್ವೇತಾ, ಎಡಪದವು ಶಾಕೆಯ ಶಾಖಾಧಿಕಾರಿ ಶಿವರಾಂ ಜತೆಗಿದ್ದರು. ಮತ್ತು ಕೈಕಂಬ ಉಪವಿಭಾಗದ ಎಲ್ಲಾ ನೌಕರರ ಸಮ್ಮುಖದಲ್ಲಿ ಜಗದೀಶ್ ಮೂರ್ತಿ ಅವರ ಧರ್ಮಪತ್ನಿಯಾದ ಲತಾ ಜಗದೀಶ್ ಮೂರ್ತಿ ಇವರನ್ನು ಸನ್ಮಾನಿಸಲಾಯಿತು. ಲೋಕೇಶ್ ಸ್ವಾಗತಿಸಿ, ವಾಲ್ಟರ್ ಧನ್ಯವಾದವಿತ್ತರು, ಎಡಪದವು ಶಾಖೇಯ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.















