ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಜೂನ್ 7ರಂದು ಸಂಜೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ವೇಳೆ 2013- 14ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಿಕ್ಕಿದೆ. ಅರ್ಹ ವಿದ್ಯಾಥರ್ಿಗಳ ಬಗ್ಗೆ ಅಂಕ ಪಟ್ಟಿಯ ನಕಲು ಪ್ರತಿಯ ದಾಖಲೆ ಸಹಿತ ಜೂನ್ 4ರ ಒಳಗಾಗಿ ಪ್ರೆಸ್ ಕ್ಲಬ್ಗೆ ವಿವರ ನೀಡುವಂತೆ ಕೋರಲಾಗಿದ್ದು ಹೆಚ್ಚಿನ ಮಾಹಿತಿಗೆ ಪ್ರೆಸ್ ಕ್ಲಬ್ ದೂರವಾಣಿ (0824 2450111) ಸಂಖ್ಯೆಯನ್ನು ಸಂಪಕರ್ಿಸುವಂತೆ ಕೋರಲಾಗಿದೆ.
ಮರುದಿನ ಜೂನ್ 7ರಂದು ಪ್ರೆಸ್ ಕ್ಲಬ್ ದಿನಾಚರಣೆ ಅಂದು ಸಂಜೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಈ ಸಂದರ್ಭ ಪತ್ರಕರ್ತರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಗೀತ, ನೃತ್ಯ, ಮಿಮಿಕ್ರಿ, ಏಕಪಾತ್ರಾಭಿನಯ, ಪ್ರಹಸನ..ಇತ್ಯಾದಿ ಪ್ರದರ್ಶನಗಳನ್ನು ನೀಡಬಹುದಾಗಿದೆ. ವೈಯುಕ್ತಿಕ ಹಾಗೂ ತಂಡ ಪ್ರದರ್ಶನಕ್ಕೆ ಅವಕಾಶವಿದೆ. ಪ್ರದರ್ಶನ ನೀಡುವವರು ಜೂನ್ 4ರ ಒಳಗಾಗಿ ಪ್ರೆಸ್ ಕ್ಲಬ್ಗೆ ವಿವರ ನೀಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರೆಸ್ ಕ್ಲಬ್ ದೂರವಾಣಿ ಸಂಖ್ಯೆಯನ್ನು (0824 2450111) ಸಂಪಕರ್ಿಸುವಂತೆ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *