ಭೋಪಾಳ: ಇಲ್ಲಿಯ ಎಮ್.ಪಿ.ನಗರದ ಗಾಯತ್ರಿ ಶಕ್ತಿಪೀಠದಲ್ಲಿ ಮೇ 4 ರಂದು ಯುಗ-ನಿರ್ಮಾಣ-ಇಸ್ಲಾಮೀ ದೃಷ್ಟಿಕೋನ ಈ ವಿಷಯದ ಮೇಲೆ ಹರಿದ್ವಾರದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರದಿಂದ ಚರ್ಚಾಗೋಷ್ಠಿ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಉತ್ತರಪ್ರದೇಶದ ರಾಮಪುರದ ವರ್ಲ್ಡ್ ಆರ್ಗನೈರೆsಶನ್ ಆಫ್ ರಿಲಿಜಿಯಸ್ ನಾಲೇಜಿನ ಸೈಯ್ಯದ್ ಅಬ್ದುಲ್ಲಾ ತಾರಿಕ ಮತ್ತು ಹರಿದ್ವಾರದ ಶಾಂತಿಕುಂಜದ ಪ್ರತಿನಿಧಿ ವೀರೇಶ್ವರ ಉಪಾಧ್ಯಾಯರವರ ವ್ಯಾಖ್ಯಾನ ಆಯೋಜಿಸಲಾಗಿತ್ತು. ವ್ಯಾಖ್ಯಾನದ ಸಮಯದಲ್ಲಿ ನಮಾಜದ ಸಮಯವಾಗಿರುವುದರಿಂದ ಅಲ್ಲಿ ಉಪಸ್ಥಿತರಿದ್ದ ಮುಸಲ್ಮಾನರು ಶಕ್ತಿ ಪೀಠದ ಪ್ರಾಂಗಣದಲ್ಲಿ ನಮಾಜು ಮಾಡಿದರು.
