ಬಂಟ್ವಾಳ: ಪುರಸಭೆ ವತಿಯಿಂದ ಇಲ್ಲಿನ ಬಿ.ಸಿ.ರೋಡ್ ಸಮೀಪದ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಳಿ ಗುರುವಾರ ಬೆಳಿಗ್ಗೆ ‘ನಿರ್ಮಲ ಬಂಟ್ವಾಳ ಮತ್ತು ಸ್ವಚ್ಛ ಭಾರತ’ 21ನೇ ಅಭಿಯಾನ ಕಾರ್ಯಕ್ರಮ ನಡೆಯಿತು.
ಪುರಸಭೆ ಸದಸ್ಯ ಸದಾಶಿವ ಬಂಗೇರ, ಜಗದೀಶ ಕುಂದರ್, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ ಭಟ್, ಉಪನ್ಯಾಸಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.
