ಬಂಟ್ವಾಳ: ಶ್ರೀ ರಾಮ ಮಂದಿರ ಕೊಟ್ಟಿಂಜ-ಕೊಡ್ಮಾಣ್ ಇದರ ಪ್ರತಿಷ್ಠಾ ದಶಮಾನೋತ್ಸವವನ್ನು ಶ್ರೀ ವ್ಯಾಘ್ರೇಶ್ವರಿ ಭಜನಾ ಮಂದಿರ ತೀವುಕಾಡು ಇದರ ಪ್ರಧಾನ ಅರ್ಚಕರಾದ ಹರಿಯಪ್ಪ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಪ್ರಾರ್ಥನೆ ಪ್ರಣ್ಯಾಹ, ಗಣಪತಿ ಹೋಮ ನಡೆದು ಸಂಜೆ ಭಜನಾ ಮಂಗಲೋತ್ಸವ ಮಹಾ ಮಂಗಳಾರತಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಗಳಾದ ವೆಂಕಟೇಶ ನಾವುಡ ಪೊಳಲಿ, ಕಾಂತಪ್ಪ ಶೆಟ್ಟಿ ಕೊಡ್ಮಾಣ್, ಮಂದಿರದ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ದಿನೇಶ್ .ಟಿ.ಶೆಟ್ಟಿ (ಸಂಚಾಲಕರು ಯಕ್ಷ ಮಿತ್ರದುಬಾಯಿ) ವಹಿಸಿದ್ದರು. ಸಾಂಸ್ಕ್ರ ತಿಕ ಕಾರ್ಯಕ್ರಮದ ಅಂಗವಾಗಿ ವಾದಿರಾಜ ಕಲ್ಲುರಾಯರ ನಿರೂಪಣೆಯಲ್ಲಿ ಯಕ್ಷ-ಗಾನ-ವೈಭವ -ಅಪೂರ್ವ ಹಾಡುಗಾರಿಕೆ ಕಾರ್ಯಕ್ರಮ ಪ್ರಸಿದ್ದ ಭಾಗವತರುಗಳಿಂದ ನಡೆಯಿತು.
THA_2853

THA_3050

THA_3119

THA_3133

THA_3137

THA_3141

THA_3151
ಮರುದಿನ ಬೆಳಿಗ್ಗೆ ಶ್ರೀರಾಮ ಸಹಸ್ರನಾಮ ಹೋಮ ಮತ್ತು ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆದು ನಂತರ ದಶಮಾನೋತ್ಸವ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸಂಸ್ಥಾನ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶಿವಚನ ನೀಡಿದರು. ಮೇರಮಜಲು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಸತೀಶ್ ನಾಯಕ್ ಕೊಡ್ಮಾಣ್ ಅಧ್ಯಕ್ಷತೆ ವಹಿಸಿದ್ದು, ಪುಂಡಾರಿಕಾಕ್ಷ(ಯೋಗಾಚಾರ್ಯ ಬೆಳ್ಳೂರು) ಧಾರ್ಮಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಯಕ್ಷಗಾನ ಮಿತ್ರಾ ದುಬಾಯಿ ಇದರ ಸಂಚಾಲಕರಾದ ದಿನೇಶ್.ಟಿ.ಶೆಟ್ಟಿ ಕೊಟ್ಟಿಂಜ ಇವರ ಕನಸಿನ ಕೂಸಾದ “ಶ್ರೀರಾಮ ಚೈತನ್ಯ ಯೋಜನೆಯನ್ನು” ಈ ಸಂದರ್ಭದಲ್ಲಿ ಇಬ್ಬರು ಅಂಗವಿಕಲರಿಗೆ ಸ್ವಾಮೀಜಿ ಸಹಾಯಧನವನ್ನು ಹಸ್ತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ಕಡುಬಡವರಿಗೆ, ಅಂಗವಿಕಲರಿಗೆ ,ಸಂಕಷ್ಟದಲ್ಲಿರುವವರಿಗೆ ಯಕ್ಷ ಮಿತ್ರದುಬಾಯಿ ಬಳಗದಿಂದ ಸಹಾಯ ಹಸ್ತವನ್ನು ನೀಡುವ ಭರವಸೆಯನ್ನು ಈ ಸಂದರ್ಭದಲ್ಲಿ ಇದರ ಸಂಚಾಲಕರಾದ ದಿನೇಶ್.ಟಿ.ಶೆಟ್ಟಿಯವರು ವಿವರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿರುವ ಕೋಡ್ಮಾಣ್ ಕಾಂತಪ್ಪ ಶೆಟ್ಟಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು. ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಇವರಿಂದ ಬನತ ಬಬ್ಬರ್ಯೆ ತುಳು ಯಕ್ಷಗಾನ ಬಯಲಾಟ ನಡೆಯಿತು.

By Suddi9

Leave a Reply

Your email address will not be published. Required fields are marked *