ಪೊಳಲಿ ಇತಿಹಾಶ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿದ್ಧಿಯಲ್ಲಿ ಮಾ.15 ರಂದು ರಾತ್ರಿ ದ್ವಜರೋಹಣಗೊಂಡಿತು. 
ಮಳಲಿ ಸೀಮೆಯವರು ಹಾಗೂ ಊರಿನವರು ಸೇರಿಕೊಂಡು ತೆಂಗಿನ ಸೋಗೆಯ ಸೂಟೆ ವಾದ್ಯ ಘೋಷದೊಂದಿಗೆ ಭಂಡಾರ ಬರುವಾಗ ಅಮ್ಮುಂಜೆ ಗುತ್ತಿನವರು ವಾದ್ಯ ಘೋಷ್ಟಿಯೊಂದಿಗೆ ಸಾವಿರ ಸೀಮೆಯ ಜೊತೆಯಲ್ಲಿ ದೇವಸ್ಥಾನದ ಬಡಗು ಬದಿಯಲ್ಲಿರುವ ಕೋಳಿಕುಂಟ ಗದ್ದೆಗೆ ಹೋಗಿ ಅಲ್ಲಿ ಭಂಡಾರವನ್ನು ಎದುರುಗೊಂಡು ಸಂಬ್ರಮದಿಂದ ಕರೆ ತರುವರು ಆಮೇಲೆ ದೇವಸ್ಥಾನದಲ್ಲಿ ಗುತ್ತಿನವರು, ಸ್ಥಾನದವರು,ಆರ್ಚಕರು ಇದ್ದು ಪ್ರಾರ್ಥಿಸಿ ಧ್ವಜ ಪಟದೊಂದಿಗೆ ದೇವರ ಬಲಿ ಹೊರಟು ಬಂದು ದ್ವಜಾರೋಹಣ ನಡೆಯುವುದು.









