ಪೊಳಲಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಶಿವಾಜಿ ಶಾಖೆ ಅಮ್ಮುಂಜೆ , ಬಡಕಬೈಲ್, ಮಣಿಕಂಠಪುರ ಇದರ ಎರಡನೇ ವರ್ಷದ ಅಂಡರ್ ಆರ್ಮ್ ಶೈಲಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ “‘ಹಿಂದೂ ಟ್ರೋಫಿ”- 2016

ಮಾ.13ರಂದು ಭಾನುವಾರ ಬೆಳಗ್ಗೆ 9ಗಂಟೆಗೆ ಬಡಕಬೈಲ್ ಶಿವಾಜಿ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.ಇದರ ಉದ್ಘಾಟನೆಯನ್ನು ಉಳಿಪಾಡಿಗುತ್ತು ರಾಜೇಶ್ ನ್ಯಾಕ್ ನೆರವೇರಿಸಲಿದ್ದಾರೆ.ಶರಣ್ ಪಂಪ್ವೆಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿ ಗುರುರಾಜ ಬಂಟ್ವಾಳ, ಸುಭಾಶ್ ಪಡೀಲ್ ಹಾಗೂ ಮುಖ್ಯ ಅತಿಥಿಗಳಾಗಿ ಸುರೇಶ್ ಸಾಲ್ಯಾನ್ ಬೆಂಜನಪದವು, ಭರತ್ ಕುಮ್ಡೇಲ್, ಪ್ರವೀಣ್ ಬೆಂಜನಪದವು, ಭುಜಂಗ ಕುಲಾಲ್ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ವೆಂಕಟೇಶ್ ನಾವಡ, ಯಶವಂತ ಪೊಳಲಿ, ಸುಧಾಕರ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಪೊಳಲಿ, ಸುಖೇಶ್ ಚೌಟ, ಚಂದ್ರಶೇಖರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ. ಎಂದು ವೀರ ಶಿವಾಜಿ ಶಾಖೆಯ ಪ್ರಕಟನೆ ತಿಳಿಸಿದೆ.
