ಕೊಡ್ಮಾಣ್: ಸಂಸ್ಕಾರಕ್ಕೆ ಮತ್ತು ದೇಶಭಕ್ತಿಯ ವಿಕಾಸನಕ್ಕಾಗಿ ಕೊಡ್ಮಾಣ್ ಜಯಭಾರತ ಗ್ರಾಮ ವಿಕಾಸ ಪ್ರತಿಷ್ಠಾನ ಇವರ ಆಶ್ರಯದಲ್ಲಿ ದ.ಕ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ “ಜಯಭಾರತ ಟ್ರೋಫಿ 2016” ಹೊನಲು ಬೆಳಕಿನ ಮಕ್ತ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಕೊಡ್ಮಾಣ್ಣ್ ನಲ್ಲಿ ಫೆ.27ರಂದು ಜರಗಿತು.
ಅಧ್ಯಕ್ಷತೆಯನ್ನು ಮೇರಮಜಲು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ನಾಯ್ಕ ವಹಿಸಿದ್ದರು.ಪುದು ಜಿ.ಪಂಚಾಯತ್ಗೆ ಚುನಾಯಿತರಾಗಿ ಆಯ್ಕೆಯಾದ ರವೀಂದ್ರ ಕಂಬಳಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ತಾಲೂಕು ಪಂ.ಅಧ್ಯಕ್ಷೆ ಶೈಲಜ ಪಿ. ಶೆಟ್ಟಿ, ತಾ.ಪಂ.ಸದಸ್ಯ ಗಣೇಶ್ , ಮೆರಮಜಲು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ, ಮೋಹನ, ವಿವೇಕ ಆಳ್ವ, ಸೋಮಪ್ಪ ಕೋಟ್ಯಾನ್ ತುಂಬೆ, ಮತ್ತಿತರರು ಉಪಸ್ಥಿತರಿದ್ದರು. ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಸ್ವಾಗತಿಸಿ , ದಾಮೋದರ ನೆತ್ತರಕೆರೆ ವಂದಿಸಿ, ಸುರೇಶ್ ನಾವೂರ ಕಾರ್ಯಕ್ರಮ ನೀರೂಪಿಸಿದರು.










