ಕೈಕಂಬ: ಗುರುಪುರ ಕೈಕಂಬ ಯಕ್ಷತರಂಗಿಣಿ ಕಲಾ ಸಂಸ್ಥೆಯ ಒಂಭತ್ತನೇ ವಾರ್ಷಿಕೋತ್ಸವವು ಕೈಕಂಬದ ವಿನಾಯಕ ಮೈದಾನದಲ್ಲಿ ಹೊಸನಗರ ಮೇಳದ ರಂಗಸ್ಥಳದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮೂವರು ಕಲಾವಿದರನ್ನು ಸನ್ಮಾನಿಸಿ ಪರಿಸರದ ಒಬ್ಬರಿಗೆ ವೈದ್ಯಕೀಯ ನೆರವು ನೀಡಲಾಯಿತು.
ಸಮಾರಂಭದಲ್ಲಿ ಶ್ರೀ ಹೊಸನಗರ ಮೇಳದ ಕಲಾವಿದ ಶ್ರೀ ಅಂಬಾ ಪ್ರಸಾದ ಪಾತಾಳರವರಿಗೆ ಬೈಲು ಮೂಡುಕರೆ ಗುತ್ತು ದಿ| ರಾಜೀವ ಭಂಡಾರಿ ಸ್ಮರಣಾರ್ಥ ಸನ್ಮಾನವನ್ನು ಯಕ್ಷತರಂಗಿಣಿಯ ಉಮೇಶ ಭಂಡಾರಿ ನೆರವೇರಿಸಿದರು. ಕಟೀಲು ಮೇಳದ ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ ಮತ್ತು ಸಸಿಹಿತ್ಲು ಮೇಳಧ ಖಳಾವಿದ ಸುದರ್ಶನ್ ಶೆಟ್ಟಿ ಪೊಳಲಿ ಇವರುಗಳನ್ನು ಯಕ್ಷತರಂಗಿಣಿ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಜುಶ್ರೀ ಸಂಕೀರ್ಣದ ಮಾಲಕರಾಗಿರುವ ಹರಿರಾವ್, ಹೊಸನಗೆ ಮೇಳದ ವ್ಯವಸ್ಥಾಪಕ ದಿವಾಕರ ಕಾರಂತ, ರಮೇಶ್ ಮಲ್ಲಿ, ವಿನಾಯಕ ಮೈದಾನದ ಮಾಲಕ ರಾಜೇಂದ್ರ ಹೆಗ್ಡೆ ಭಾಗವಹಿಸಿದ್ದರು. ಯಕ್ಷತರಂಗಿಣಿ ಬಳಗದ ಉಮೇಶ್ ಭಂಡಾರಿ ,ನರಸಿಂಗ ರೈ, ಡಾ| ಶ್ರೀಪತಿ ಕಿನ್ನಿಕಂಬಳ, ಕೆ.ಲೋಕೇಶ, ರಾಜೀವ.ಕೆ, ವಿ.ಸಿ.ಶೇಖರ್, ಕೆ.ವರುಣಾಕ್ಷ, ಸುರೇಶ್ ಎ.ಜೆ., ರಾಜೇಶ ರಾವ್ , ಕೆ.ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಮಹೇಶ್ ಶೆಟ್ಟಿ, ಸತೀಶ್ ಶೆಟ್ಟಿ ಹಾಗೂ ರಮೇಶ್ ರಾವ್ ಕೈಕಂಬ ಹಾಗೂ ರಮೇಶ್ ರಾವ್ ಕೈಕಂಬ ಸನ್ಮಾನ ಪತ್ರಗಳನ್ನು ವಾಚಿಸಿದರು. ಕೆ.ಶ್ರೀಧರ ರಾವ್ ಕೈಕಂಬ ಕಾರ್ಯಕ್ರಮ ನಿರೂಪಿಸಿದರು. ಹೊಸನಗರ ಮೇಳದವರಿಂದ ರಾಣಿ ಶಶಿ ಪ್ರಭೆ ಇಂದ್ರಜಿತು ಯಕ್ಷಗಾನ ಪ್ರಸಂಗ ಜರುಗಿತು.
