ಬಂಟ್ವಾಳ : ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ ಮೇಲ್ಸೆತುವೆ ಮುಖ್ಯವೃತ್ತದಲ್ಲಿಯೇ ಹೊಂಡ ಗುಂಡಿಗಳು ಬಾಯ್ದೆರೆದು ಇಲ್ಲಿ ಸಂಚರಿಸಲು ಸಾಕಷ್ಟು ಬ್ಯಾಲೆನ್ಸ್ ಮಾಡಬೇಕಾದ ಕಷ್ಟದ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಲ್ ನಿರ್ಮಾಣವಾದ ಬಳಿಕ ಇಲ್ಲಿನ ಹಳೆಯ ವೃತ್ತವನ್ನು ತೆಗೆದು ಹಾಕಲಾಗಿತ್ತು. ಹೊಸ ವ್ರತ್ತವನ್ನು ಮಾಡುವಾಗ ಡಾಮರನ್ನು ಅಗೆದು ತೆಗೆದು ಮತ್ತೆ ಡಾಮರು ಹಾಕದೇ ಇರುವುದರಿಂದ ಇಲ್ಲಿ ಗುಂಡಿ ಬಿದ್ದಿದೆ. ಈ ಬಗ್ಗೆ ಪ್ರಾಧಿಕಾರಕ್ಕೆ ಪೋಲಿಸ್ ಇಲಾಖೆ ದೂರು ನೀಡಿತ್ತು. ಅ ಬಳಿಕ ಇಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ರಸ್ತೆಯ ಅಗಲೀಕರಣ ವನ್ನು ಟ್ರಾಫಿಕ್ ಪೋಲೀಸ್ ಅಧಿಕಾರಿ ಚಂದ್ರಶೇಖರಯ್ಯ ಅವರು ಮಾಡಿಸಿದ್ದರು.

3

1 (1)

2ರಸ್ತೆ ಅಗಲೀಕರಣವಾದ ಮೇಲೆ ಡಾಮರೀಕರಣ ಆಗದೆ ದೂಳು ಮಯರಸ್ತೆಯಾಗಿ ಮಾರ್ಪಟ್ಟಿತ್ತು. ಇಂದು ಟ್ರಾಫಿಕ್ ಎಸ್ಸ್ಯೆ ಚಂದ್ರಶೇಖರಯ್ಯ ಅವರೇ ನಿಂತು ಇಲಾಖೆಯವರ ಮನವೊಲಿಸಿ ಡಾಮರೀಕರಣವನ್ನು ಮಾಡಿಸುವ ಮೂಲಕ ಸಾರ್ವಜನಿಕರ ಪ್ರಸಂಶೆಗೆ ಪಾತ್ರರಾದರು.

By suddi9

Leave a Reply

Your email address will not be published. Required fields are marked *