ಶಿಕ್ಷಣದ ವ್ಯಾಪಾರೀಕರಣದಿಂದ ಮಾನವೀಯ ಮೌಲ್ಯಗಳ ಕುಸಿತ:ಇಸ್ಮತ್ ಪಜೀರ್
ಕಡಬ : ಶಿಕ್ಷಣವು ಇಂದು ವ್ಯಾಪಾರೀಕರಣಗೊಳ್ಳುತ್ತಿದೆ,ಇದರಿಂದಜ್ಞಾನದಾಹವನ್ನು ನೀಗಿಸಬೆಕಾದ ಶಿಕ್ಷಣ ಸಂಸ್ಥೆಗಳು ಆಡಂಬರದ ಕೆಂದ್ರಗಳಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಮಾನವೀಯಮೌಲ್ಯ ಕುಸಿಯುತ್ತಿದೆ. ಏಕರೂಪದ ಶಿಕ್ಷಣ ವ್ಯವಸ್ಥೆಯಿಂದಇದಕ್ಕೆ ಪರಿಹಾರ ಕಂಡುಕೊಳ್ಳಬಹುದುಎಂದುಯುವ ಲೇಖಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಇಸ್ಮತ್ ಪಜೀರ್‍ಅಭಿಪ್ರಾಯಪಟ್ಟಿದ್ದಾರೆ.

ಅವರು ಏಮ್ಸ್ ಪ್ರಥಮದರ್ಜೆ ಕಾಲೇಜು ಕಡಬ ಇದರ ಬ್ಯಾರಿ ಸಂಘದ ಆಶ್ರಯದಲ್ಲಿ ನಡೆದ ಶಿಕ್ಷಣದ ವ್ಯಾಪಾರೀಕರಣ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಸೆಮಿರಾ ಕೆ ಎ ವಹಿಸಿದ್ದರು.
ಪತ್ರಕರ್ತ ಎಂ.ಆರೀಫ್‍ಕಲ್ಕಟ್ಟಕಾರ್ಯಕ್ರಮಉದ್ಘಾಟಿಸಿದರು. ವೇದಿಕಯಲ್ಲಿಎಮ್ಸ್‍ಕಾಲೇಜಿನಗೌರವ ಸಲಹೆಗಾರ ಹಾಜಿರಫೀಕ್ ಮಾಸ್ಟರ್, ಉಪನ್ಯಾಸಕಿ ದೀಪಿಕಾ, ಬ್ಯಾರಿ ಸಂಘದ ಸಂಯೋಜಕ ಮಹಮ್ಮದ್‍ಇಕ್ಬಾಲ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನ್ವತ್ ಬಾನು ಪ್ರಾರ್ಥಿಸಿ, ಮಹಮ್ಮದ್‍ಅಭಿಝಿರ್ ವಂದಿಸಿದರು, ಅಶಿಬಾ ಕಾರ್ಯಕ್ರಮ ನಿರ್ವಹಿಸಿದರು.



