ಬಂಟ್ವಾಳ: ಸಾಲೆತ್ತೂರುಗ್ರಾಮದ ಸರ್ವಧರ್ಮೀಯರ ಭಾವೈಕ್ಯತಾಕೇಂದ್ರವಾಗಿ ಬೆಳೆದಿರುವ ಕಟ್ಟತ್ತಿಲಜುಮಾ ಮಸೀದಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಅಸ್ಸಯ್ಯಿದ್ ವಲಿಯುಲ್ಲಾಹಿ ತಆಲಾ (ಖ.ಸಿ.)ರವರ ಹೆಸರಿನಲ್ಲಿಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಮಖಾಂ ಉರೂಸ್‍ಕಾರ್ಯಕ್ರಮವುಮಾರ್ಚ್ 4ರಿಂದ ಮಾರ್ಚ್13ರವರೆಗೆ ಮುಡಿಪು ಸಂಯುಕ್ತಖಾಝಿ ಫಝಲ್‍ಕೋಯಮ್ಮ ತಂಙಳ್‍ರವರ ಅಧ್ಯಕ್ಷತೆಯಲ್ಲಿಜರಗಲಿದೆ.
ಮಾರ್ಚ್4ರಂದು ಶುಕ್ರವಾರಜುಮಾ ನಮಾಜಿನ ಬಳಿಕ ಉದ್ಯಾವರಅಸ್ಸಯ್ಯಿದ್ ಹಾಮಿದ್ ತಂಙಳ್‍ರವರು ಕೂಟುಝಿಯಾರತ್ ಮತ್ತುಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಅದೇ ದಿನ ರಾತ್ರಿತಾಜುಲ್ ಉಲಮಾರವರ ಸುಪುತ್ರಅಸ್ಸಯ್ಯಿದ್ ಹಾಮಿದ್‍ಇಂಬಿಚ್ಚಿಕೋಯ ತಂಙಳ್ ಕೊೈಲಾಂಡಿಯವರಿ ಮತ ಪ್ರಭಾಷಣವನ್ನುಉದ್ಘಾಟಿಸಲಿದ್ದಾರೆ.ಕಟ್ಟತ್ತಿಲ್ಲಜುಮಾ ಮಸೀದಿಯ ಗೌರವಾಧ್ಯಕ್ಷ ಕೆ.ಎಂ.ಉಮರ್ ಮದನಿ ಸ್ವಾಗತಿಸಲಿದ್ದು, ತ್ರಿಶೂರು ಮುದರ್ರಿಸ್ ಬಶೀರ್ ಮದನಿ ನೀಲಗಿರಿ, ಕಟ್ಟತ್ತಿಲ ಜುಮಾ ಮಸೀದಿ ಖತೀಬ್‍ಅಬ್ದುಲ್‍ಜಲೀಲ್ ಸಖಾಫಿ, ಹೈದರ್‍ಅಶ್ರಫಿ, ಉಮ್ಮರ್ ಲತ್ವೀಫಿ ಭಾಗವಹಿಸಿ ಉಪದೇಶ ನೀಡಲಿದ್ದಾರೆ.

katattila uroosಮಾ.5ರಂದುಅಸ್ಸಯ್ಯಿದ್‍ಜಾಫರ್ ಸಾಧಿಕ್ ತಂಙಳ್‍ರವರ ನೇತೃತ್ವದಲ್ಲಿಜಲಾಲಿಯ್ಯರಾತೀಬ್‍ನಡೆಯಲಿದ್ದು, ಕಿಲ್ಲೂರುಅಬ್ದುಲ್ ಹಮೀದ್ ಫೈಝಿ ಭಾಷಣ ಮಾಡಲಿದ್ದಾರೆ.
ಮಾ.6ರಂದು ಭಾನುವಾರ ಸಂಜೆ ಮೂರುಗಂಟೆಗೆಸೌಹಾರ್ಧ ಸಂಗಮ ನಡೆಯಲಿದ್ದು, ಜಿಲ್ಲಾಉಸ್ತುವಾರಿ ಸಚಿವರಮಾನಾಥರೈ, ಆರೋಗ್ಯ ಸಚಿವಯು.ಟಿ.ಖಾದರ್, ಯೋಜನಾಆಯೋಗದಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವಾರುಧಾರ್ಮಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.ಅದೇ ದಿನ ರಾತ್ರಿ ಸಜಿಪಅಶ್ಫಾಕ್ ಫೈಝಿಧಾರ್ಮಿಕಉಪನ್ಯಾಸ ನೀಡಲಿದ್ದಾರೆ.
ಮಾರ್ಚ್8ರಂದುಬುರ್ದಾ ಮಜ್ಲಿಸ್‍ಕಾರ್ಯಕ್ರಮವು ಹಾಫಿಳ್ ಅನ್ವರ್ ಸಖಾಫಿ ಶಿರಿಯರವರ ನೇತೃತ್ವದಲ್ಲಿ ನಡೆಯಲಿದ್ದು, ಇಖ್‍ವಾನ್ ಶಾದುಲಿಯಾ ಬುರ್ದಾ ಸಂಘದಅಪ್ಸಲ್‍ಕಣ್ಣೂರು, ಶಮ್ಮಾಸ್ ಉಳ್ಳಾಲ ಭಾಗವಹಿಸಲಿದ್ದಾರೆ. ಅಸ್ಸಯ್ಯಿದ್ ಎನ್‍ಸಿಎಂ ಫಝಲ್ ಹಾಮಿದ್‍ಕೋಯಮ್ಮ ತಂಙಳ್ ಅಲ್‍ಬುಖಾರಿದುವಾ ನೆರವೇರಿಸಲಿದ್ದಾರೆ. ಮಾ.9ರಂದು ಪ್ರಮುಖ ವಾಗ್ಮಿ ಪೇರೋಡ್‍ಅಬ್ದುಲ್‍ರಹ್ಮಾನ್ ಸಖಾಫಿ ಭಾಗವಹಿಸಿ ಧಾರ್ಮಿಕಉಪದೇಶ ನೀಡಲಿದ್ದಾರೆ.
ಮಾರ್ಚ್11ರಂದು ಸಂಜೆ ಏಳು ಗಂಟೆಗೆಅಸ್ಸಯ್ಯಿದ್ ಮುಹಮ್ಮದ್‍ಅಶ್ರಫ್ ತಂಙಳ್‍ರವರ ನೇತೃತ್ವದಲ್ಲಿ ಸ್ವಲಾತ್‍ಮಜ್ಲಿಸ್ ನಡೆಯಲಿದ್ದು ಹುಸೈನ್ ಸಅದಿ ಕೆ.ಸಿರೋಡ್ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾರ್ಚ್12ರಂದು ಖತುಮುಲ್‍ಕುರಾನ್ ಮತ್ತುತಾಜುಲ್ ಉಲಮ ಅನುಸ್ಮರಣಾ ಸಂಗಮ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್‍ಬುಖಾರಿಯವರ ನೇತೃತ್ವದಲ್ಲಿ ನಡೆಯಲಿದ್ದು, ಅಖಿಲ ಭಾರತ ಸುನ್ನೀಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಅಸ್ಸಯ್ಯಿದ್‍ಅಲ್‍ಹಾದಿ ಜಲಾಲುದ್ದೀನ್ ತಂಙಳ್ ಅಲ್ ಅಲವಿ ಅಲ್ ಮದನಿ ದುವಾ ಆಶೀರ್ವಚನ ನೀಡಲಿದ್ದಾರೆ.
ಮಾರ್ಚ್ 13ರಂದು ಭಾನುವಾರ ಹಗಲು ಉರೂಸ್ ಸಮಾರೂಪ ಸಮಾರಂಭನಡೆಯಲಿದ್ದು, ಕೂಟುಝಿಯಾರತ್ ಮೌಲಿದ್ ಪಾರಾಯಣ ನಡೆಯಲಿದ್ದು, ಉಳ್ಳಾಲ ಖಾಝಿಅಸ್ಸಯ್ಯಿದ್ ಫಝಲ್‍ಕೋಯಮ್ಮ ತಂಙಳ್ ಕೂರದುವಾ ಆಶೀರ್ವಚನ ನೀಡಲಿದ್ದಾರೆ. ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ, ಮಹ್ಮೂದ್‍ಲ್ ಫೈಝಿ ವಾಲೆಮಂಡೋವುಉಸ್ತಾದ್, ಅಬ್ಬದುಲ್‍ಜಲೀಲ್ ಸಖಾಫಿ,ಕಟ್ಟತ್ತಿಲ್ಲಜುಮಾ ಮಸೀದಿಗೌರವಾಧ್ಯಕ್ಷ ಕೆ.ಎಂ. ಉಮರ್ ಮದನಿ, ಅಧ್ಯಕ್ಷಅಬ್ದುಲ್‍ಖಾದರ್ ಹಾಜಿಅಗರಿ ಭಾಗವಹಿಸಲಿದ್ದಾರೆಎಂದು ಮಂಗೂರಿನಲ್ಲಿ ನಡೆದಪತ್ರಿಕಾಗೋಷ್ಠಿಯಲ್ಲಿಕಾರ್ಯದರ್ಶಿ ಕೆ.ಎಂ. ಮೊಹ್ಯುದ್ದೀನ್ ಮದನಿ ತಿಳಿಸಿದ್ದಾರೆ.
ಈ ಸಂದರ್ಭಕಟ್ಟತ್ತಿಲ್ಲಜುಮಾ ಮಸೀದಿ ಅಧ್ಯಕ್ಷಅಬ್ದುಲ್‍ಖಾದರ್ ಹಾಜಿಅಗರಿ, ಮಖಾಂ ಶರೀಫ್ ಮಸೀದಿ ಪ್ರ.ಕಾರ್ಯದರ್ಶಿ ಪಿ.ಇಬ್ರಾಹಿಂ ನಾಟೆಕಲ್ಲು, ,ಕೋಶಾಧಿಕಾರಿ ಕೆ.ಪಿ. ಅಬ್ದುಲ್‍ಖಾದರ್, ಸಾಲೆತ್ತೂರುಗ್ರಾ.ಪಂ. ಸದಸ್ಯ ಎ.ಸಿ.ಮೊಯಿದಿನ್ ಕುಂಞ ಉಪಸ್ಥಿತಿಯಿದ್ದರು.

By suddi9

Leave a Reply

Your email address will not be published. Required fields are marked *