ಬಂಟ್ವಾಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ವತಿಯಿಂದ ಇಲ್ಲಿನ ಪ್ರಸಿದ್ಧ ಶರಭೇಶ್ವರ ದೇವಳದ ಜೀರ್ಣೋದ್ಧಾರ ಸ್ವರ್ಣಪ್ರಶ್ನೆ ಚಿಂತನೆಗೆ ರೂ 10 ಸಾವಿರ ಮೊತ್ತದ ದೇಣಿಗೆಯನ್ನು ಭಾನುವಾರ ಸಲ್ಲಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಸರಪಾಡಿ, ಕ್ಷೇತ್ರದ ಅರ್ಚಕ ಶಂಕರನಾರಾಯಣ ಹೊಳ್ಳ, ಮೊಕ್ತೇಸರರಾದ ಉಮೇಶ್ ಆಳ್ವ ಕೆ, ಸುರೇಂದ್ರ ಪೈ, ವಿಠಲ್ ಎಂ, ಕೊರಗಪ್ಪ ಗೌಡ, ವ್ಯವಸ್ಥಾಪಕ ಗಿರೀಶ್ ನಾಯ್ಕ್ ಎನ್, ಕಿರಣ್ ಸರಪಾಡಿ ಮತ್ತಿತರು ಇದ್ದರು. 
